ಧಾರವಾಡದಲ್ಲಿ ಪೊರಕೆ ಸುನಾಮಿ ಕಸ ಗೂಡಿಸಲು ಸಜ್ಜಾದ ಶಿವಕಿರಣ | AAP | DHARWAD |
ಹೀಗೆ ದೆಹಲಿ ದಂಗಲನಲ್ಲಿ ಧೂಳೆಬ್ಬಿಸಿ ಎಲ್ಲ ಪಕ್ಷಗಳನ್ನು ಮಕಾಡೆ ಮಲಗಿಸಿ ರಾಷ್ಟ್ರ ರಾಜಕೀಯದಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿಸಿದ್ದು ಕೇಜ್ರಿವಾಲರ ಆಮ್ ಆದ್ಮಿ ಪಕ್ಷ. ದೆಹಲಿ ಜನರ ಪ್ರತಿಯೊಬ್ಬರ ನಾಡಿಮಿಡಿತದಲ್ಲೂ ಆಪ್ ಬಗ್ಗೆ ವಿಶೇಷ ಗೌರವವಿದೆ. ಇದಕ್ಕೆ ದೆಹಲಿಯಲ್ಲಿ ಆದಂತಹ ಅಭಿವೃದ್ಧಿ ಕಾರ್ಯಗಳೇ ಜೀವಂತ ಉದಾಹರಣೆ. ಈಗ ಅಪ್ ಪಕ್ಷ ಅವಳಿನಗರದ ಪಾಲಿಕೆ ಚುನಾವಣೆಯಲ್ಲಿ ತನ್ನ ಪವರ್ ತೋರಿಸಲು ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಹಾಗಾದರೆ ಅವರು ಯಾರು ಅಂತ ತೋರಿಸ್ತೀವಿ ನೋಡಿ. ಹೀಗೆ ಅರವಿಂದ ಕೇಜ್ರಿವಾಲರ ತರಹ ತಲೆ ಮೇಲೆ ಗಾಂಧಿ ಟೋಪಿ ಧರಿಸಿ ಮತ ಬೇಟೆ ಯಾಡುತ್ತಿರುವ ಧಾರವಾಡದ ಆಮ್ ಆದ್ಮಿ ಶಿವಕಿರಣ್ ರಾಮಪ್ಪ ಅಗಡಿ. ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲರ ಪ್ರಭಾವಕ್ಕೆ ಒಳಗಾಗಿ ಇಂಜಿನಿಯರ್ ವೃತ್ತಿ ತೊರೆದು ಬದಲಾವಣೆಗಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಒಂದುವರೆ ವರ್ಷದಿಂದ ಆಮ್ ಆದ್ಮಿ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಈ ಬಾರಿಯ ಅವಳಿ ನಗರ ಪಾಲಿಕೆ ಚುನಾವಣೆಯಲ್ಲಿ 12 ನೆ ವಾರ್ಡನಿಂದ ಆಪ್ ಅಭ್ಯರ್ಥಿಯಾಗಿ ಕಾಣದಲ್ಲಿದ್ದಾರೆ. ಸುಮಾರು 9600 ಜನಸಂಖ್ಯೆ ಹೊಂದಿರುವ ಇವರ ವಾರ್ಡಿನಲ್ಲಿ ವಿದ್ಯವಂತರೆ ಹೆಚ್ಚು. ಆಮ್ ಆದ್ಮಿಯ ಕಿರಣ್ ಅಗಡಿ ಮಾತ್ರ ದೆಹಲಿ ಮಾದರಿಯಲ್ಲಿ ಬದಲಾವಣೆ ಮಾಡ್ತೀನಿ ಒಂದು ಅವಕಾಶ ಕೊಡಿ ಅಂತ ಮತ ಭೀಕ್ಷಾಟನೆ ನಡೆಸಿದ್ದಾರೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತಿದ್ದಾರೆ ಹೀಗಾಗಿ ದೆಹಲಿ ಮಾದರಿಯಲ್ಲಿ ಅಭಿವೃದ್ಧಿ ನಡೆಯಬೇಕಾಗಿದೆ. ಆದರೆ ಅಧಿಕಾರದಲ್ಲಿರುವ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಸರ್ಕಾರಿ ಸಂಸ್ಥೆಗಳನ್ನು ಮುಚ್ಚಿ ಹಾಕಿ ಖಾಸಗಿಕರಣದತ್ತ ಹೆಜ್ಜೆ ಇಡುತ್ತಿವೆ. ಇದು ದೇಶಕ್ಕೆ ಮಾರಕ ಎಂದು ಆಕ್ರೋಶ ಹೊರಹಾಕಿದರು. ಈ ಬಾರಿಯ ಪಾಲಿಕೆ ಚುನಾವಣೆ ಕುರಿತು ಜನರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ. ಸರ್ಕಾರಿ ಶಾಲೆಗಳನ್ನು ವಿಶ್ವದರ್ಜೆಗೆ ಏರಿಸುವುದು, ವಿಶ್ವದರ್ಜೆಯ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಗುಂಡಿ, ಧೂಳು ರಹಿತ ರಸ್ತೆ ನಿರ್ಮಾಣ, ಕಾಲಮಿತಿಯೊಳಗೆ ಜನರ ಮನೆ ಬಾಗಿಲಿಗೆ ಸೌಲಭ್ಯ, ವಿಶ್ವದರ್ಜೆಯ ಕೆರೆಗಳ ನಿರ್ಮಾಣ, ವಾರ್ಡಿನಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ, ಉತ್ತಮ ಶೌಚಾಲಯಗಳ ನಿರ್ಮಾಣ, ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್, ವಾರ್ಡ್ಗೆ ಮೂಲಭೂತ ಸೌಕರ್ಯ, ಉದ್ಯೋಗ ಸೇರಿದಂತೆ ಹತ್ತು ಹಲವು ಅಜೆಂಡಾ ಹಿಡಿದುಕೊಂಡು ಚುನಾವಣೆ ಕಣದಲ್ಲಿರುವ ಯುವ ಉತ್ಸಾಹಿ ಶಿವಕುಮಾರ್ ಬಗ್ಗೆ 12 ನೆ ವಾರ್ಡಿನ ಮತದಾರರು ಬದಲಾವಣೆಗಾಗಿ ಒಲವು ವ್ಯಕ್ತ ಪಡಿಸುತ್ತಿದ್ದಾರೆ. ಒಟ್ಟಾರೆ ಜಾಣ ಮತದಾರರು ಯಾರ ಕೊರಳಿಗೆ ಗೆಲುವಿನ ಹಾರ ಹಾಕುತ್ತಾರೆ ಆನೋದನ್ನ ಕಾದು ನೋಡೋಣ