ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಇವರ ಹಿರಿಯ ಮಗಳು ನಿಧನ

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಇವರ ಹಿರಿಯ ಮಗಳು ನಿಧನ

ಧಾರವಾಡ : ಧಾರವಾಡದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಇವರ ಹಿರಿಯ ಮಗಳು, ಶಾಸಕ‌ ಅರವಿಂದ ಬೆಲ್ಲದ ಇವರ ಹಿರಿಯ ಸಹೋದರಿ ಹಾಗೂ ಕರ್ನಲ್ ಮಂಜುನಾಥ ಮೂಗಿ ಇವರ ಧರ್ಮಪತ್ನಿ ನಂದಾ ಮೂಗಿ( ಬೆಲ್ಲದ) ಇವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ತಂದೆ ಚಂದ್ರಕಾಂತ ಬೆಲ್ಲದವರ ಮನೆ ಗೌರಿ  ಕೃಪಾ ಮರಾಠಾ ಕಾಲನಿ ರಸ್ತೆ ಯಲ್ಲಿ‌ ಇಡಲಾಗಿದ್ದು, ಅವರ ಅಂತಿಮ ಯಾತ್ರೆ ಇಂದು ಮಧ್ಯಾನ್ಹ ೧೨ ಘಂಟೆಗೆ ಹೊರಟು, ಹೊಸಾಯಲ್ಲಾಪುರದ ಲಿಂಗಾಯತ ರುದ್ರಭೂಮಿಯಲ್ಲಿ ಸಂಸ್ಕಾರ ನಡೆಸಲಾಗುವದು.

ದುಃಖ ತಪ್ತರು ಆಶ್ನಾ ಮೂಗಿ, ಮೂಗಿ ಬಂಧುಗಳು ಬೈಲಹೊಂಗಲ, ಲೀಲಾವತಿ ಬೆಲ್ಲದ,ಚಂದ್ರಕಾಂತ ಬೆಲ್ಲದ, ಅರವಿಂದ ಬೆಲ್ಲದ ಮತ್ತು ಸಹೋದರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ..