ನಾಳೆ ಮಂಡ್ಯಕ್ಕೆ 'ಅಮಿತ್ ಶಾ' ಎಂಟ್ರಿ : ಅನ್ನದಾತರ ಕಿಚ್ಚಿಗೆ ಬೆದರಿ ಕಾರ್ಯಕ್ರಮ ದಿಢೀರ್ ಬದಲಾವಣೆ..!
ಮಂಡ್ಯ : ಅನ್ನದಾತರ ಕಿಚ್ಚಿಗೆ ಬಿಜೆಪಿ ಸರ್ಕಾರ ಬೆದರಿದ್ಯಾ ಎಂಬ ಪ್ರಶ್ನೆ ಮೂಡಿದ್ದು, ಸರ್ಕಾರಗಳ ವಿರುದ್ಧ ರೈತರ ಆಕ್ರೋಶ ಹಿನ್ನೆಲೆ ಕೇಂದ್ರ ಗೃಹ ಸಚಿವರ ಕಾರ್ಯಕ್ರಮ ದಿಢೀರ್ ಬದಲಾವಣೆ ಮಾಡಲಾಗಿದೆ.
ಬೆಂಗಳೂರಿನಿಂದ ಹುಲಿಗೆರೆಪುರಕ್ಕೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿ ಹುಲಿಗೆರೆಪುರ ಹೆಲಿಪ್ಯಾಡ್ನಿಂದ ರಸ್ತೆ ಮೂಲಕ ಗೆಜ್ಜಲಗೆರೆಗೆ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ.
ಮಂಡ್ಯದ ಪಿಇಟಿ ಗ್ರೌಂಡ್ ನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದ್ದು, ಹೆಲಿಕಾಪ್ಟರ್ ಮೂಲಕ ಪಿಇಟಿ ಗ್ರೌಂಡ್ ಗೆ ಬಂದು ಅಮಿತ್ ಶಾ ವಾಪಸ್ ಆಗಲಿದ್ದಾರೆ.