ಕಾರವಾರದಲ್ಲೊಂದು ಅಪರೂಪದ ರಂಗೋಲಿ ಜಾತ್ರೆ

ಕಾರವಾರದ ಮಾರುತಿ ಗಲ್ಲಿಯಲ್ಲಿ ನಡೆಯುವ ಮಾರುತಿ ದೇವರ ಜಾತ್ರೆ ತನ್ನದೇ ಆದ ವಿಶೇಷತೆಗಳಿಂದ ಪ್ರಸಿದ್ದಿ ಪಡೆದಿದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಮಾರುತಿ ದೇವರ ಜಾತ್ರೆ ನಡೆಯುತ್ತದೆ. ಕಾರವಾರದಲ್ಲಿರುವ ಮಾರುತಿ ದೇವರಿಗೆ ರಂಗೋಲಿಯೆ ಪ್ರಿಯ. ಈ ಜಾತ್ರೆ ರಂಗೋಲಿ ಮೂಲಕವೇ ಪ್ರಸಿದ್ದಿ ಪಡೆದಿದ್ದು, ತರಹೇವಾರು ರಂಗೋಲಿ ಬಣ್ಣಗಳಿಂದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಮತ್ತೊಂದೆಡೆ ರಂಗೋಲಿಯಲ್ಲಿ ಅರಳಿದ ಚಿತ್ತಾರವನ್ನು ಜನರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿಯುತ್ತಿದ್ದಾರೆ.