ಉದಯ್‌ಪುರ ಶಿರಚ್ಛೇದ ಪ್ರಕರಣ; ಹಂತಕರಿಗೆ ಸಹಾಯ ಮಾಡಿದ್ದು ಪಾಕ್ ಪ್ರಜೆಗಳು

ಉದಯ್‌ಪುರ ಶಿರಚ್ಛೇದ ಪ್ರಕರಣ; ಹಂತಕರಿಗೆ ಸಹಾಯ ಮಾಡಿದ್ದು ಪಾಕ್ ಪ್ರಜೆಗಳು

ಉದಯ್‌ಪುರ ಶಿರಚ್ಛೇದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ 11 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಕನ್ಹಯ್ಯಾ ಲಾಲ್‌ನನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದ್ದಲ್ಲದೆ ಅವರನ್ನು ಪ್ರಮುಖ ಆರೋಪಿಗಳನ್ನು ತೀವ್ರಗಾಮಿಯನ್ನಾಗಿಸಲು ಆಡಿಯೊ ಮತ್ತು ವೀಡಿಯೋಗಳನ್ನು ಒದಗಿಸಿದ್ದರು ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ. ಎನ್ಐಎ ಮೂಲಗಳ ಪ್ರಕಾರ ಪ್ರಮುಖ ಆರೋಪಿಗಳು ಕರಾಚಿ ಮೂಲದ ಸಲ್ಮಾನ್, ಅಬು ಇಬ್ರಾಹಿಂ ಜೊತೆ ಸಂಪರ್ಕದಲ್ಲಿದ್ದರು.