ವಿಠ್ಠಲ ದೇವರ ದರ್ಶನಕ್ಕೆ ಅವಕಾಶ: ಆಗ್ರಹ

ವಿಠ್ಠಲ ದೇವರ ದರ್ಶನಕ್ಕೆ ಅವಕಾಶ: ಆಗ್ರಹ

ಬೆಳಗಾವಿ: 'ಪಂಢರಪುರದಲ್ಲಿ ವಿಠ್ಠಲ ದೇವರ ದರ್ಶನಕ್ಕೆ ಅವಕಾಶ ನೀಡಬೇಕು' ಎಂದು ಆಗ್ರಹಿಸಿ ವಾರಕರಿ ಸಂಪ್ರದಾಯದ ವಿಠ್ಠಲದೇವರ ಭಕ್ತರು ಶಿವಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಭಜನೆ ಮಾಡುತ್ತಾ ಪಾದಯಾತ್ರೆಯಲ್ಲಿ ಬಂದು ಮನವಿ ಸಲ್ಲಿಸಿದರು.

'ಲಾಕ್‍ಡೌನ್ ತೆರವಾದರೂ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಆಷಾಢ ಮಾಸದಲ್ಲಿ ಪಂಢರಪುರದ ವಿಠ್ಠಲ ದೇವರಿಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಭಜನೆ-ಪ್ರಾರ್ಥನೆ ನೆರವೇರುತ್ತದೆ. ಅಲ್ಲಿಗೆ ಭಕ್ತರಿಗೆ ಪ್ರವೇಶ ನೀಡುವಂತಾಗಲು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕ್ರಮ ವಹಿಸಬೇಕು' ಎಂದು ಒತ್ತಾಯಿಸಿದರು.