ಮುರುಗೇಶ್ ನಿರಾಣಿಗೆ ಸಿಎಂ ಮಾಡಿದ್ರೆ ವಿಧಾನಸೌಧಕ್ಕೆ ಅವಮಾನ: ಶಾಸಕ ಯತ್ನಾಳ್ ಕಿಡಿ

ಮುರುಗೇಶ್ ನಿರಾಣಿಗೆ ಸಿಎಂ ಮಾಡಿದ್ರೆ ವಿಧಾನಸೌಧಕ್ಕೆ ಅವಮಾನ: ಶಾಸಕ ಯತ್ನಾಳ್ ಕಿಡಿ

ಬೆಳಗಾವಿ : ಮುರುಗೇಶ್ ನಿರಾಣಿ ನನ್ನ ಮುಂದೆ ಬಚ್ಚಾ, ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಾಣಿ ಹಿಂದೂ ದೇವತೆಗಳ ಬಗ್ಗೆ ಒಂದು ಆಡಿಯೋ ಬಿಟ್ಟಿದ್ದರು. ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ. ಹೆಚ್ಚು ಮಾತಾಡಿದರೆ ಎಲ್ಲಾ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.