ಆಸ್ಪತ್ರೆಯಲ್ಲಿ ಬೆಂಕಿ : 10 ಮಂದಿ ಕೊರೊನಾ ಸೋಂಕಿತರು ಸಜೀವ ದಹನ

ಆಸ್ಪತ್ರೆಯಲ್ಲಿ ಬೆಂಕಿ : 10 ಮಂದಿ ಕೊರೊನಾ ಸೋಂಕಿತರು ಸಜೀವ ದಹನ

ಸ್ಕೋಪ್ಕೆ,ಸೆ.9-ಕೋವಿಡ್ ರೋಗಿಗಳ ಮೇಕ್‍ಶಿಫ್ಟ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 10 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿ, ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಅಮೆರಿಕಾದ ಉತ್ತರ ಮೆಸಿಡೋನಿಯಾದಲ್ಲಿ ನಡೆದಿದೆ.

ಟೆಟೋವೊ ನಗರದಲ್ಲಿ ಇತ್ತಿಚೆಗೆ ಕೊರೊನಾ ಸೋಂಕಿನ ಪ್ರಮಾಣ ಉಲ್ಬಣಗೊಂಡ ಹಿನ್ನಲೆಯಲ್ಲಿ ಸ್ಥಾಪಿಸಲಾಗಿದ್ದ ಮೇಕ್‍ಶಿಫ್ಟ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಈ ಆನಾಹುತವಾಗಿದೆ.

ಆಗ್ನಿ ಅನಾಹುತಕ್ಕೆ ನಿಖರ ಕಾರಣ ಏನು ಎಂದು ತಿಳಿದುಬಂದಿಲ್ಲ. ಆದರೆ, ಸಣ್ಣ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಅಲ್ಲಿನ ಪ್ರಧಾನಿ ಜೋರನ್ ಜೇವ್ ಫೇಸ್‍ಬುಕ್‍ನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ದೇಶದ ಶೇ.30 ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ. ಆದರೆ, ಮೆಸಿಡೋನಿಯಾದಲ್ಲಿ ಇತ್ತಿಚೆಗೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಕಂಡುಬರುತ್ತಿದೆ.