ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ ಮೆರೆದಾಡಿದ ಶ್ರೇಯಸ್ ಅಯ್ಯರ್

ಕಾನ್ಪುರ: ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಶತಕ ಸಿಡಿಸಿ ಮಿಂಚಿದರು. ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಬಾರಿಸಿದರು.
ಮೊದಲ ದಿನದಾಟದ ಅಂತ್ಯಕ್ಕೆ 75 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಶ್ರೇಯಸ್ ಅಯ್ಯರ್ ಇಂದು ಬಿರುಸಿನ ಆಟವಾಡಿದರು.
92.2 ಓವರ್ ಅಂತ್ಯಕ್ಕೆ ಭಾರತ ತಂಡ 288 ರನ್ ಗೆ ಆರು ವಿಕೆಟ್ ಕಳೆದುಕೊಂಡಿದೆ. ಜಡೇಜಾ 50 ರನ್ ಗೆ ಔಟಾದರೆ, ಕೀಪರ್ ಸಾಹ ಕೇವಲ ಒಂದು ರನ್ ಗೆ ವಿಕೆಟ್ ಒಪ್ಪಿಸಿದರು.
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ 16ನೇ ಭಾರತೀಯ ಆಟಗಾರ ಎಂಬ ದಾಖಲೆಗೆ ಶ್ರೇಯಸ್ ಪಾತ್ರರಾದರು. ನ್ಯೂಜಿಲ್ಯಾಂಡ್ ವಿರುದ್ಧ ಈ ದಾಖಲೆ ಮಾಡಿದ ಮೂರನೇ ಭಾರತೀಯ ಎಂಬ ದಾಖಲೆ ಬರೆದರು.