ಸೆಮಿಫೈನಲ್‌ನಲ್ಲಿ ಭಾರತದ ಪರ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ಕಣಕ್ಕಿಳಿಯಲಿ: ಅನಿಲ್ ಕುಂಬ್ಳೆ

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2022ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಪರ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ಕಣಕ್ಕಿಳಿಯಲಿ ಎಂದು ಭಾರತದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಭಾರತ ತಂಡದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಚರ್ಚಿತ ವಿಷಯವಗಿರುವ ವಿಕೆಟ್ ಕೀಪರ್ ಸ್ಥಾನದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ DK ಬದಲು ರಿಷಭ್ ಪಂತ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗಬೇಕು ಎಂಬುದು ಅನಿಲ್ ಕುಂಬ್ಳೆ ಅಭಿಪ್ರಾಯವಾಗಿದೆ.
ಕ್ರಿಕ್‌ಇನ್ಫೋ ಟಿ20 ಟೈಂನಲ್ಲಿ ಮಾತನಾಡಿದ ಅನಿಲ್ ಕುಂಬ್ಳೆ, ದಿನೇಶ್ ಕಾರ್ತಿಕ್ ಇಡೀ ಟೂರ್ನಮೆಂಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಗಮನಾರ್ಹವಾದ ಪ್ರದರ್ಶನವನ್ನು ನೀಡಲಿಲ್ಲ. ಹೀಗಾಗಿ ಇಂಗ್ಲೆಂಡ್‌ನ ಆದಿಲ್ ರಶೀದ್ ಮಣಿಸಲು ಭಾರತವು ರಿಷಭ್ ಪಂತ್ ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಭಾರತದ ಬಲಗೈ ಬ್ಯಾಟರ್‌ಗಳ ವಿರುದ್ಧ ಪ್ರಭಾವ ಬೀರಬಹುದು. ಆದ್ರೆ ರಿಷಭ್ ಪಂತ್ ರಿಷಭ್ ಪಂತ್ ಕೌಂಟರ್ ಅಟ್ಯಾಕ್ ಮಾಡಬಹುದು ಎಂದು ಅಂದಾಜಿಸಿದ್ದಾರೆ.'' ನನ್ನ ಪ್ರಕಾರ ಭಾರತವು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಬದಲಾವಣೆ ಬಯಸಿದ್ದಲ್ಲಿ, ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್‌ಗೆ ಅವಕಾಶ ನೀಡಬೇಕು. ರಿಷಭ್ ಪಂತ್‌ರನ್ನು ಆಯ್ಕೆ ಮಾಡದೇ ಇದ್ದರೆ, ಭಾರತವು ಯಾವುದೇ ಹೊಸ ಬದಲಾವಣೆಯನ್ನು ತರಲಾಗುವುದಿಲ್ಲ'' ಎಂದು ಅನಿಲ್ ಕುಂಬ್ಳೆ ಇಂಡಿಯಾ ಟುಡೆಗೆ ಹೇಳಿದ್ದಾರೆ.
'ಏಕೆಂದರೆ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಲೈನಪ್‌ನಲ್ಲಿ ಹೆಚ್ಚಾಗಿ ಪರಿಣಾಮ ಬೀರಿಲ್ಲ. ಕೇವಲ ಒಂದು ಪಂದ್ಯವನ್ನ ಬಿಟ್ಟರೆ ಅವರು ಉತ್ತಮ ಅವಕಾಶವನ್ನು ಪಡೆದಿಲ್ಲ. ಹೀಗಾಗಿ ನಾನು ರಿಷಭ್ ಪಂತ್ ಆಯ್ಕೆಯನ್ನು ಬಯಸುತ್ತೇನೆ ಮತ್ತು ಅಡಿಲೇಡ್ ಓವಲ್ ಲಾಭವನ್ನ ಪಡೆಯಲು ಸಲಹೆ ನೀಡುತ್ತೇನೆ. ಓವಲ್‌ನಲ್ಲಿ ಆದಿಲ್ ರಶೀದ್ ಸ್ಪಿನ್ ಬಲಗೈ ಬ್ಯಾಟರ್‌ಗಳಿಗೆ ಕಂಟಕವಾಗಬಹುದು. ಆತ ಚೆಂಡನ್ನು ಟರ್ನ್ ಮಾಡುವುದಲ್ಲಿ ಉತ್ತಮವಾಗಿದ್ದಾನೆ. ಆತ ಉತ್ತಮ ಗೂಗ್ಲಿ ಬೌಲಿಂಗ್ ಮಾಡುವುದರಿಂದ ರಿಷಭ್ ಪಂತ್ ಆತನ ದಾಳಿ ಹಿಮ್ಮೆಟ್ಟಿಸಬಹುದು ಎಂಬುದನ್ನ ಭಾರತ ತನ್ನ ತಲೆಯಲ್ಲಿ ಇಟ್ಟುಕೊಳ್ಳಬೇಕು'' ಎಂದು ಕುಂಬ್ಳೆ ಹೇಳಿದ್ದಾರೆ.
ಭಾರತ-ಇಂಗ್ಲೆಂಡ್ ಪಂದ್ಯ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಜಿಂಬಾಬ್ವೆ ವಿರುದ್ಧ ರಿಷಭ್ ಪಂತ್‌ರನ್ನ ಕಣಕ್ಕಿಳಿಸಿದ್ದು, ಕಾಯತಂತ್ರವಾಗಿದೆ. ಇಬ್ಬರು ವಿಕೆಟ್ ಕೀಪರ್‌ಗಳು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ಅರ್ಹರಾಗಿದ್ದಾರೆ ಎಂದಿದ್ದಾರೆ. ಜೊತೆಗೆ ಇಬ್ಬರು ಆಟಗಾರರು ಆಯ್ಕೆಗೆ ಲಭ್ಯವಿದ್ದಾರೆ ಎಂದು ತಿಳಿಸಿದ್ದಾರೆ.