ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!

ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!

ವಾಷಿಂಗ್ಟನ್‌: ವಿದೇಶದಿಂದ ಬಂದ ತಾಯಿಯನ್ನು ಸ್ವಾಗತಿಸಲು ಮಗ ವಿಮಾನ ನಿಲ್ದಾಣದಕ್ಕೆ ಹೂಗುಚ್ಛ ಹಿಡಿದು ಬಂದರೆ, ಆತನ ತಾಯಿ ಚಪ್ಪಲಿ ಏಟು ನೀಡಿರುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್‌ಗಳು ಬರುತ್ತಿವೆ.

ನಾವು ನಿನ್ನನ್ನು ತುಂಬಾ ನೆನಪಿಸಿಕೊಳ್ಳುತ್ತಿದ್ದೆವು ಅಮ್ಮಾ ಎನ್ನುವ ಪೊಸ್ಟರ್ ಹಿಡಿದುಕೊಂಡಿರುವ ಮಗ, ಹೂಗುಚ್ಛದೊಂದಿಗೆ ಸ್ವಾಗತಿಸಲು ಬಂದಾಗ ತಾಯಿ ರೊಚ್ಚಿಗೆದ್ದು ತನ್ನ ಚಪ್ಪಲಿಯನ್ನು ತೆಗೆದು ಹಿಗ್ಗಾಮುಗ್ಗ ಥಳಿಸಿದ್ದಾಳೆ. ಮಗ ಅಲ್ಲಿಂದ ಓಡಿಹೋಗಿದ್ದಾನೆ.

ಅಲ್ಲಿದ್ದವರೆಲ್ಲಾ ಈ ದೃಶ್ಯವನ್ನು ನೋಡುತ್ತಿದ್ದರೆ ಕೆಲವರು ಇದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಅನ್ವರ್ ಎಂಬುವವರು ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು 'ಮೈ ಮದರ್ ಈಸ್ ಬ್ಯಾಕ್' ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

ಇದಾಗಲೇ 2 ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದು, 70 ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. ಈ ತಾಯಿ ಏಕೆ ಹೀಗೆ ಮಾಡಿರಬಹುದು ಎಂದು ಕಮೆಂಟಿಗರೇ ಊಹಿಸಿಕೊಂಡು ಕೆಲವೊಂದು ಕಮೆಂಟ್‌ ಹಾಗಿದ್ದಾರೆ. ಬಹುಶಃ ಆತನಿಗೆ ತಾಯಿಯನ್ನು ಕರೆಸಿಕೊಳ್ಳಲು ಇಷ್ಟವಿರಲಿಲ್ಲ. ಇದರಿಂದ ಆಕೆ ಸಿಟ್ಟುಗೊಂಡಿರಬಹುದು ಎಂದು ಹಲವರು ಹೇಳಿದ್ದರೆ, ಈ ಅಮ್ಮ ಇದೇ ರೀತಿ ಪ್ರೀತಿ ತೋರಿಸುವುದು ಇರಬೇಕು ಎಂದಿದ್ದಾರೆ