ಇರಾನ್‌ನಲ್ಲಿ ಪ್ರತಿಭಟನೆಗಳ ನಡುವೆ ಠಾಣೆ ಮೇಲೆ ಪ್ರತ್ಯೇಕತಾವಾದಿಗಳ ದಾಳಿ: 19 ಸಾವು

ಇರಾನ್‌ನಲ್ಲಿ ಪ್ರತಿಭಟನೆಗಳ ನಡುವೆ ಠಾಣೆ ಮೇಲೆ ಪ್ರತ್ಯೇಕತಾವಾದಿಗಳ ದಾಳಿ: 19 ಸಾವು

ಟೆಹ್ರಾನ್: ಆಗ್ನೇಯ ಇರಾನ್‌ನ ಪೊಲೀಸ್ ಠಾಣೆಯ ಮೇಲೆ ಶಸ್ತ್ರಸಜ್ಜಿತ ಪ್ರತ್ಯೇಕತಾವಾದಿಗಳು ನಡೆಸಿದ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ನ ಮೂವರು ಸದಸ್ಯರು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ ಎಂದು ಸರಕಾರಿ ಐಆರ್‌ಎನ್‌ಎ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.

ಶುಕ್ರವಾರ ನಡೆದ ದಾಳಿಯಲ್ಲಿ ಜಹೇದನ್ ನಗರದ ಮಸೀದಿಯೊಂದರ ಬಳಿ ಜನರ ನಡುವೆ ಅಡಗಿಕೊಂಡು ಸಮೀಪದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

19 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಹೊಸೇನ್ ಮೊಡರೇಸಿಯನ್ನು ಉಲ್ಲೇಖಿಸಿ ಐಆರ್‌ಎನ್‌ಎ ವರದಿ ಮಾಡಿದೆ. ಸ್ವಯಂಸೇವಕ ಪಡೆಗಳು ಸೇರಿದಂತೆ 32 ಗಾರ್ಡ್ ಸದಸ್ಯರು ಸಹ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ಔಟ್ಲೆಟ್ ಹೇಳಿದೆ.

ಇರಾನ್ ಯುವತಿಯೊಬ್ಬಳು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ನಂತರ ಇರಾನ್‌ನಲ್ಲಿ ನಡೆದ ರಾಷ್ಟ್ರವ್ಯಾಪಿ ಸರಕಾರಿ ವಿರೋಧಿ ಪ್ರತಿಭಟನೆಗಳಿಗೆ ಈ ದಾಳಿಗೂ ಸಂಬಂಧವಿದೆಯೇ ಎಂಬುದು ತತ್ ಕ್ಷಣಕ್ಕೆ ಸ್ಪಷ್ಟವಾಗಿಲ್ಲ.