ಜೆಡಿಎಸ್‌ದ್ದು ಹಣದ ಮೇಲೆ ರಾಜಕಾರಣ ಮಾಡುವ ಸಂಸ್ಕೃತಿ: ನಳಿನ್ ಕುಮಾರ್ ಕಟೀಲ್

ಮೈಸೂರು: ಜೆಡಿಎಸ್ ಪಕ್ಷದ್ದು ಹಣದ ಮೇಲೆ ರಾಜಕಾರಣ ಮಾಡುವ ಸಂಸ್ಕೃತಿ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬುಧವಾರ ಇಲ್ಲಿ ತಿರುಗೇಟು ನೀಡಿದರು.
'ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಹಣ ವಸೂಲಿಗಾಗಿ ಆಗಾಗ್ಗೆ ರಾಜ್ಯಕ್ಕೆ ಬರುತ್ತಿರುತ್ತಾರೆ' ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ತಿರುಗೇಟು ನೀಡಿದ್ದಾರೆ.
'ತಮ್ಮ ಅನುಭವವನ್ನು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿ ಕಾಣುತ್ತದೆ. ರಾಜ್ಯ, ದೇಶ ಆಳಿದ ಇವರ ನಾಲಿಗೆ ಸರಿಯಾಗಿದ್ದಿದ್ದರೆ ಜೆಡಿಎಸ್‌ಗೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಈ ಪಕ್ಷದ ಪರಿಸ್ಥಿತಿ ಏನೆಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ' ಎಂದರು.