ಬಾಂಗ್ಲಾದೇಶದ ಲಸಿಕೆ ಮಹಿಳಾ ವಿಜ್ಞಾನಿ ಫಿರ್ದೌಸಿ ಖಾದ್ರಿ ಸೇರಿ ಐವರಿಗೆ ರಾಮೋನ್‌ ಮ್ಯಾಗ್ಸೆಸ್ಸೆ ಪ್ರಶಸ್ತಿ ಘೋಷಣೆ

ಬಾಂಗ್ಲಾದೇಶದ ಲಸಿಕೆ ಮಹಿಳಾ ವಿಜ್ಞಾನಿ ಫಿರ್ದೌಸಿ ಖಾದ್ರಿ ಸೇರಿ ಐವರಿಗೆ ರಾಮೋನ್‌ ಮ್ಯಾಗ್ಸೆಸ್ಸೆ ಪ್ರಶಸ್ತಿ ಘೋಷಣೆ

ಬಾಂಗ್ಲಾದೇಶದ ಲಸಿಕೆ ಮಹಿಳಾ ವಿಜ್ಞಾನಿ ಫಿರ್ದೌಸಿ ಖಾದ್ರಿ ಸೇರಿ ಐವರಿಗೆ ರಾಮೋನ್‌ ಮ್ಯಾಗ್ಸೆಸ್ಸೆ ಪ್ರಶಸ್ತಿ ಘೋಷಣೆ

ಏಷ್ಯಾದ ನೊಬೆಲ್​ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವ ರಾಮೋನ್​ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಬಾಂಗ್ಲಾದೇಶದ ಲಸಿಕಾ ಮಹಿಳಾ ವಿಜ್ಞಾನಿ ಡಾ. ಫಿರ್ದೌಸಿ ಖಾದ್ರಿ ಮತ್ತು ಪಾಕಿಸ್ತಾನ ಮೈಕ್ರೋ ಫೈನಾನ್ಸ್ ಪ್ರವರ್ತಕ ಮುಹಮ್ಮದ್ ಅಮ್ಜದ್ ಸಾಕಿಬ್ ಸೇರಿ ಒಟ್ಟು ಐವರ ಹೆಸರನ್ನು ಘೋಷಣೆ ಮಾಡಲಾಗಿದೆ. ಉಳಿದಂತೆ ಫಿಲಿಪಿನೋ ಮೀನುಗಾರ ಮತ್ತು ಪರಿಸರವಾದಿ ರಾಬರ್ಟೋ ಬಲ್ಲೋನ್, ನಿರಾಶ್ರಿತರಿಗೆ ನೆರವು ನೀಡಿದ ಅಮೆರಿಕದ ಸ್ಟೀವನ್ ಮುನ್ಸಿ ಮತ್ತು ತನಿಖಾ ಪತ್ರಿಕೋದ್ಯಮದ ಮೂಲಕ ಸ್ಫೂರ್ತಿಯಾದ ಇಂಡೋನೇಷ್ಯಾದ ವಾಚ್​ಡಾಕ್​ ಈ ಬಾರಿಯ ಮ್ಯಾಗ್ಸೆಸ್ಸೆಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಾಂಗ್ಲಾದೇಶದ ವಿಜ್ಞಾನಿ ಡಾ. ಫಿರ್ದೌಸಿ ಖಾದ್ರಿ (70) ಅವರು ಯುಕೆಯ ಲಿವರ್​ಪೂಲ್​ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್​ ಪದವಿ ಪಡೆದಿದ್ದಾರೆ. ನಂತರ ಬಾಂಗ್ಲಾದೇಶದಲ್ಲಿರುವ ಅಂತಾರಾಷ್ಟ್ರೀಯ ಅತಿಸಾರ ರೋಗ ಸಂಶೋಧನಾ ಕೇಂದ್ರಕ್ಕೆ 1988ರಲ್ಲಿ ಸೇರ್ಪಡೆಯಾದರು. ವೈಜ್ಞಾನಿಕ ವೃತ್ತಿಗಾಗಿ ಜೀವನವನ್ನೇ ಮುಡಿಪಾಗಿಟ್ಟವರಾಗಿದ್ದಾರೆ. ಪಾಕಿಸ್ತಾನದ ಅರ್ಥಶಾಸ್ತ್ರಜ್ಞ ಸಾಕಿಬ್, ಶೂನ್ಯ ಬಡ್ಡಿ ಸಾಲ ನೀಡಲು ಬಳಸುವ ಮೊದಲ ಬಡ್ಡಿ ರಹಿತ ಮೈಕ್ರೋಫೈನಾನ್ಸ್ ಪ್ರೋಗ್ರಾಂ ಅಖುವತ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.