ವಿಜಯಪುರದಲ್ಲಿ ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ

ವಿಜಯಪುರ: ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಗಂಡ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಕಾಳಿಕಾ ನಗರ ನಿವಾಸಿ ಈರಯ್ಯಾ ಮಠ ಎಂಬಾತನು ಅದೇ ಬಡಾವಣೆಯ ದಾನಯ್ಯ ಗಣಚಾರಿ ಪತ್ನಿ ವಾಣಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ.
ಕಾಳಿಕಾ ನಗರದ ವಾಸಿಯಾಗಿದ್ದ ಈರಯ್ಯಾ ಮಠ ಎಂಬುವವರು ತಮ್ಮ ಪತ್ನಿ ಕವಿತಾಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಗಿದ್ದರು. ಇವರ ಮನೆಯ ಸನೀಹವೇ ಇವರ ಸಂಬಂಧಿಕರಾದ ದಾನಯ್ಯ ಗಣಾಚಾರಿ ಮನೆಯಿತ್ತು. ಡಿಸೆಂಬರ್ 17 ರ ಬೆಳಿಗ್ಗೆ 9 ಗಂಟೆ ಸುಮಾರು ಈರಯ್ಯನ ಮನೆಗೆ ಬಂದ ದಾನಯ್ಯ ಗಣಾಚಾರಿ ಹಾಗೂ ಆತನ ಸಹೋದರ ಸಿದ್ದಯ್ಯಾ ಹಾಗೂ ಸ್ನೇಹಿತ ಸಚಿನ್ ಬಂದು ಈರಯ್ಯಾ ಮಠನನ್ನು ಕರೆದಿದ್ದಾರೆ. ಆಗ ಯಾಕೆ ಎಂದು ಕವಿತಾ ಪ್ರಶ್ನೆ ಮಾಡಿದ್ದಾಳೆ. ಆಗ ಮಾತನಾಡಿದ ದಾನಯ್ಯ ನನ್ನ ಪತ್ನಿ ವಾಣಿಯ ತಂದೆ ಗುರಣ್ಣ ಉರ್ಫ ಗುರಯ್ಯಾ ನ್ಯಾಯ ಪಂಚಾಯತಿ ಮಾಡುವುದು ಇದೆ.