ದೀಪಾವಳಿಗೆ ಖಾಸಗಿ ಬಸ್​ ಮಾಲೀಕರಿಂದ ಶಾಕ್: ಹುಬ್ಬಳ್ಳಿಗೆ ಹೋಗಲು ಟಿಕೆಟ್ ದರ ಕೇಳಿ ಥರಗುಟ್ಟಿದ ಪ್ರಯಾಣಿಕರು

ದೀಪಾವಳಿಗೆ ಖಾಸಗಿ ಬಸ್​ ಮಾಲೀಕರಿಂದ ಶಾಕ್: ಹುಬ್ಬಳ್ಳಿಗೆ ಹೋಗಲು ಟಿಕೆಟ್ ದರ ಕೇಳಿ ಥರಗುಟ್ಟಿದ ಪ್ರಯಾಣಿಕರು

ಬೆಂಗಳೂರು: ದೀಪಾವಳಿ ಹತ್ರ ಬಂದಿದೆ. ಸರದಿ ಸಾಲು ರಜೆ ಇರುವುದರಿಂದ ಎಲ್ಲರೂ ಊರು ಕಡೆ ಪ್ರಯಾಣ ಬೆಳೆಸುತ್ತಾರೆ. ಹೀಗಿರುವ ದೀಪಾವಳಿ ಹಬ್ಬಕ್ಕೆ ಬಸ್‌ ಮಾಲೀಕರಿಂದ ಶಾಕ್‌ ನೀಡಿದೆ.

ಖಾಸಗಿ ಬಸ್ಸುಗಳು ಟಿಕೆಟ್ ದರ ಏರಿಕೆ ಮಾಡಿವೆ. ಎರಡು ದಿನದ ಹಿಂದೆ ಇದ್ದ ದರಗಳೆಲ್ಲವು ಇಂದು ಡಬಲ್ ಆಗಿವೆ. ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ ಸಾಕಷ್ಟು ಜನರು ಊರಿನತ್ತ ಹೋಗುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ಸುಗಳ ಮಾಲೀಕರು ಬಸ್‌ ಟಿಕೆಟ್ ದರ ಹೆಚ್ಚಿಸಿದ್ದಾರೆ.

ಎರಡು ದಿನದ ಹಿಂದೆ 600 -700 ಇದ್ದಂತಹ ಟಿಕೆಟ್ ದರ ಈಗ ಡಬಲ್ ಆಗಿದೆ. ಟ್ರಾವೆಲ್ಸ್ ಮಾಲೀಕರು 2000 ದಿಂದ 5000 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಹುಬ್ಬಳ್ಳಿ - ಬೆಳಗಾವಿ ಟಿಕೇಟ್ ದರ 5 ಸಾವಿರಕ್ಕೆ ಏರಿಸಲಾಗಿದೆ. ಖಾಸಗಿ ಬಸ್ಸು ಮಾಲೀಕರು ಹಬ್ಬದ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಖಾಸಗಿ ಬಸ್ಸು ಮಾಲೀಕರ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.