ಸಚಿವ ಶ್ರೀರಾಮುಲು ಜೊತೆಗೆ ಆಲಿಂಗನ ವಿಚಾರ : ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದೇನು?
ಬಳ್ಳಾರಿ : ನಾನು ಸಚಿವ ಶ್ರೀರಾಮುಲು ಬಹಳ ವರ್ಷಗಳಿಂದ ಆತ್ಮೀಯರು, ನಾವಿಬ್ಬರೂ ಯಾವಾಗ ಸಿಕ್ಕಿದರೂ ಅಪ್ಪಿಕೊಳ್ಳುವುದು ಸಾಮಾನ್ಯ, ನಾವಿಬ್ಬರೂ ಸ್ನೇಹಿತರು ಆದರೆ ನಮ್ಮ ರಾಜಕೀಯ ನಡೆ ಬೇರೆ ಬೇರೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರು ಸಂಡೂರಿನಿಂದ ಸ್ಪರ್ಧೆ ಮಾಡುವುದಾದರೆ ಮಾಡಲಿ, ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಂಡೂರು ಕ್ಷೇತ್ರದ ಜನ ನಮ್ಮ ಕೈಬಿಡಲ್ಲ ಅನ್ನೋ ನಂಬಿಕೆ ಇದೆ. ಅನಿಲ್ ಲಾಡ್ ಸ್ಪರ್ಧಿಸಿದಾಗ ರಾಜಕೀಯವಾಗಿ ಬಡಿದಾಡಿಕೊಂಡಿದ್ದೇವು. ಹಿಂದಿನಿಂದಲೂ ನಾನು ರಾಮುಲು ಬೇರೆ ಬೇರೆ ಪಕ್ಷದಲ್ಲಿದ್ದರೂ ಸ್ನೇಹಿತರಾಗಿದ್ದೇವೆ. ರಾಜಕೀಯವೇ ಬೇರೆ, ಸ್ನೇಹವೇ ಬೇರೆ. ನಾನು ಕಲಘಟಗಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡುತ್ತೆ ಎನ್ನುವ ವಿಶ್ವಾಸವಿದೆ. ನಾನು ಸಚಿವ ಶ್ರೀರಾಮುಲುರನ್ನು ಕಾಂಗ್ರೆಸ್ ಗೆ ಆಹ್ವಾನ ಮಾಡಿಲ್ಲ ಎಂದು ಹೇಳಿದ್ದಾರೆ.