ಸಿಡಿ ಪ್ರಕರಣ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ

ಸಿಡಿ ಪ್ರಕರಣ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ

ವದೆಹಲಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿರುವ ಅಮಿತ್‌ ಶಾ ನಿವಾಸದಲ್ಲಿ ಭೇಟಿಯಾಗಿ ಅಮಿತ್‌ ಶಾ ಜೊತೆ ಚರ್ಚೆ ನಡೆಸಿದ್ದಾರೆ.

ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಎಮೇಶ್‌ ಜಾರಕಿಹೊಳಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ದಾಖಲೆ ಸಮೇತ ಅಮಿತ್‌ ಶಾಗೆ ಶಾಸಕ ರಮೇಶ್‌ ಜಾರಕಿಹೊಳಿ ವಿವರಿಸಿದ್ದಾರೆ.

ಇನ್ನು ಇತ್ತೀಚೆಗೆ ರಮೇಶ್‌ ಜಾರಕಿಹೊಳಿಯವರು ಸುದ್ದಿಗೋಷ್ಠಿ ನಡೆಸಿ ಡಿಕೆಶಿವಕುಮಾರ್ ವಿರುದ್ಧ ಆಡಿಯೋ ಬಾಂಬ್ ಸಿಡಿಸಿದ್ದರು.
ತಮ್ಮ ವಿರುದ್ಧದ ಸಿಡಿ ಬಗ್ಗೆ ಪ್ರಾಸ್ತಾಪಿಸಿದ್ದರು. ನಮ್ಮ ಮನೆಯಲ್ಲಿ ರೇಡ್​​ ಆದಾಗ 45 ಕೋಟಿ ರೂ. ಸೀಜ್‌ ಆಗಿತ್ತು. ನನಗೆ ದುಬೈ, ಲಂಡನ್, ಮುಂಬೈನಲ್ಲಿ ಫ್ಲ್ಯಾಟ್​​ ಇದೆ. ನಮ್ಮ ಮನೆಯ ಮೇಲೆ ದಾಳಿ ಆದಾಗ ಹಣ ಸೀಜ್​​ ಆಗಿತ್ತು ಎಂದು ಮಾತನಾಡಿರುವುದು ಈ ಆಡಿಯೋದಲ್ಲಿದ್ದು, ಇದು ಡಿಕೆ ಶಿವಕುಮಾರ ಅವರದ್ದೇ ಎಂದು ರಮೇಶ್ ಜಾರಕಿಹೊಳಿ ಆಡಿಯೋ ರಿಲೀಸ್ ಮಾಡಿದ್ದರು. ಈ ಸಂಬಂಧವಾಇ ಇಂದು ಕೇಂದ್ರ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ರಮೇಶ್‌ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ.