ಆಲೇಖಾನ್ ಹೊರಟ್ಟಿ ಗುಡ್ಡದಲ್ಲಿ ಕಾಡ್ಗಿಚ್ಚು

ಮಂಗಳೂರು: ಚಾರ್ಮಾಡಿ ಘಾಟಿಯ ಆಲೇಖಾನ್ ಹೊರಟ್ಟಿ ಗುಡ್ಡದಲ್ಲಿ ಭಾನುವಾರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.
ಎತ್ತರ ಪ್ರದೇಶವಾದ್ದರಿಂದ ಅಗ್ನಿ ಶಾಮಕ ವಾಹನ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಮಠದ ಮಜಲು ಬಳಿ ಬೆಂಕಿ: ಇನ್ನೊಂದು ಘಟನೆಯಲ್ಲಿ ಚಾರ್ಮಾಡಿ ಪ್ರದೇಶದ ಮಠದ ಮಜಲು ಬಳಿ ಹೆದ್ದಾರಿ ಬದಿಯ ತ್ಯಾಜ್ಯಕ್ಕೆ ಯಾರೋ ಬೆಂಕಿ ಹಚ್ಚಿದ್ದು,ಅದು ಅರಣ್ಯ ಪ್ರದೇಶದತ್ತ ಆವರಿಸುತ್ತಿದ್ದಂತೆ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.