'ಧೋನಿ ಡೌನ್ ಟು ಅರ್ಥ್'. ನಾನೀಗ ಅವರ ಅಭಿಮಾನಿ: ಫರ್ಹಾ ಖಾನ್

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಿನಿಮಾ ನಿರ್ಮಾಪಕಿ ಫರ್ಹಾ ಖಾನ್ ಹಾಡಿ ಹೊಗಳಿದ್ದಾರೆ.
ಜಾಹೀರಾತು ಚಿತ್ರೀಕರಣ ಮಾಡುವ ಸಲುವಾಗಿ ಇಂದು ಧೋನಿ ಅವರನ್ನು ಭೇಟಿ ಮಾಡಿದ್ದು, ಅವರಿಗೆ ನಿರ್ದೇಶನವನ್ನು ಸಹ ಮಾಡಿದ್ದೇನೆ. ಅವರ ವ್ಯಕ್ತಿತ್ವ ಅದ್ಭುತ ಎಂದು ನಿರ್ಮಾಪಕಿ ಹೊಗಳಿದ್ದಾರೆ.
View this post on Instagram
ಅವರು ಸಮಯಪ್ರಜ್ಞೆ ಮತ್ತು ಕೆಲಸದ ಬಗ್ಗೆ ನಿಷ್ಠೆ ಇರುವ ವ್ಯಕ್ತಿ. ಫೋಟೋ ತೆಗೆಸಿಕೊಳ್ಳಲು ನಗು ಮುಖದಲ್ಲೇ ಬರುವ ಅವರಿಗೆ ಈಗ ನಾನು ಅಭಿಮಾನಿಯಾಗಿದ್ದೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.