ಇಂದು ಢಾಕಾದಲ್ಲಿ ರೋಹಿತ್ ಶರ್ಮಾ ಸುದ್ದಿಗೋಷ್ಠಿ

ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶದಲ್ಲಿ ಬೀಡುಬಿಟ್ಟಿದ್ದು ಏಕದಿನ ಸರಣಿ ಆಡುತ್ತಿದೆ. ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡ ಪರಿಣಾಮ ಟೀಮ್ ಇಂಡಿಯಾಕ್ಕೆ ಮುಂದಿನ ಪಂದ್ಯ ಮುಖ್ಯವಾಗಿದೆ. ಇದರ ನಡುವೆ ಇಂದು ಸಂಜೆ 4:30ಕ್ಕೆ ಢಾಕಾದಲ್ಲಿ ನಾಯಕ ರೋಹಿತ್ ಶರ್ಮಾ ಸುದ್ದಿ ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ. ಡಿ.7 ಬುಧವಾರದಂದು ನಡೆಯಲಿರುವ ದ್ವಿತೀಯ ಏಕದಿನದ ಬಗ್ಗೆ ಹಿಟ್ಮ್ಯಾನ್ ಕೆಲ ಮಹತ್ವದ ಹೇಳಿಕೆ ನೀಡುವ ಸಾಧ್ಯತೆ ಇದೆ.