25 ವರ್ಷಗಳ ಹಿಂದಿನ ಘಟನೆಗೆ ರಾಹುಲ್ ಬಳಿ ಈಗ ಕ್ಷಮೆಯಾಚಿಸಿದ ಬಾಂಗ್ಲಾ ಕೋಚ್

ವಾಸ್ತವವಾಗಿ 25 ವರ್ಷಗಳ ಹಿಂದೆ ಡರ್ಬನ್‌ನಲ್ಲಿ ಭಾರತ & ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಸಚಿನ್ & ದ್ರಾವಿಡ್ ಆಫ್ರಿಕಾದ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ದರು. ಈ ವೇಳೆ ಇಬ್ಬರ ಆಟದಿಂದ ಬೇಸತಿದ್ದ ಡೊನಾಲ್ಡ್, ರಾಹುಲ್ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಇದೀಗ ಆ ದುರ್ವತನೆ ನೆನಪಿಸಿಕೊಂಡಿರುವ ಡೊನಾಲ್ಡ್ ದ್ರಾವಿಡ್ ಬಳಿ ಕ್ಷಮೆಯಾಚಿಸಿದ್ದಾರೆ. 'ನಾನು ಆ ದಿನದ ನನ್ನ ವರ್ತನೆಗೆ ರಾಹುಲ್ ಬಳಿ ಕ್ಷಮೆಯಾಚಿಸಲು ಬಯಸುತ್ತೇನೆ' ಎಂದಿದ್ದಾರೆ.