ಪ್ರಕೃತಿ ಗೀತೆಗೆ ಧ್ವನಿಯಾದ ಗಾಯಕ ವಿಜಯಪ್ರಕಾಶ್

ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕರಾದ ಸಲೀಂ-ಸುಲೇಮಾನ್ ಪ್ರತೀ ವರ್ಷ ‘ಭೂಮಿ’ ಎಂಬ ಆಲ್ಬಂ ಹೊರತರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಆಲ್ಬಂನಲ್ಲಿ ಪರಿಸರ ಕಾಳಜಿ ಮೆರೆಯುವ ಹಲವು ಹಾಡುಗಳಿವೆ. ಈ ಬಾರಿಯ ವಿಶೇಷತೆಯೆಂದರೆ, ಕನ್ನಡದಲ್ಲಿ ಒಂದು ಹಾಡು ಮೂಡಿಬಂದಿದ್ದು, ‘ಭೂಮಿ 2022’ ಹೆಸರಿನ ಈ ಹಾಡಿಗೆ ಕನ್ನಡದ ಹೆಮ್ಮೆಯ ಗಾಯಕ ವಿಜಯಪ್ರಕಾಶ್ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.