ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರಕ್ಕೆ 'ಪದ್ಮಾವತಿ' ನಾಯಕಿ ?

ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರಕ್ಕೆ 'ಪದ್ಮಾವತಿ' ನಾಯಕಿ ?

ಹೈದರಾಬಾದ್ : ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಲಿದ್ದಾರಂತೆ ಎನ್ನುವ ಸುದ್ದಿ ಕೇಳಿ ಬಂದಿದೆ.

ತಮಿಳು ತಲೈವಾ ರಜನಿ ಸದ್ಯ ‘ಅಣ್ಣಾಥೆ’ ಚಿತ್ರದಲ್ಲಿ ಬ್ಯುಝಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಚಿತ್ರೀಕರಣ ಮುಗಿಯುವ ಮುಂಚೆಯೆ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ ರಜನಿಕಾಂತ್.

ರಜನಿ ಹೊಸ ಚಿತ್ರಕ್ಕೆ ದೇಸಿಂಗ್​ ಪೆರಿಯಸ್ವಾಮಿ ನಿರ್ದೇಶನ ಮಾಡಲಿದ್ದಾರಂತೆ. ಈಗಾಗಲೇ ದೇಸಿಂಗ್​ ಅವರು ರಜನಿಗೆ ಕಥೆ ಹೇಳಿದ್ದು, ಸೂಪರ್​​ಸ್ಟಾರ್​ ಇದನ್ನು ಇಷ್ಟಪಟ್ಟಿದ್ದಾರೆ.

‘ಕೊಚಡಿಯನ್’​ ಸಿನಿಮಾದಲ್ಲಿ ರಜನಿ ಹಾಗೂ ದೀಪಿಕಾ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ, ಇದು ಮೋಷನ್​ ಸಿನಿಮಾ ಆಗಿತ್ತು. ಒಂದೊಮ್ಮೆ ಈ ಹೊಸ ಚಿತ್ರದಲ್ಲಿ ದೀಪಿಕಾ ನಟಿಸೋಕೆ ಒಪ್ಪಿದರೆ ಇದೇ ಮೊದಲ ಬಾರಿಗೆ ರಜನಿ ಜತೆ ಅವರು ಸಾಮಾನ್ಯ​ ಚಿತ್ರದಲ್ಲಿ ನಟಿಸಿದಂತಾಗುತ್ತದೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ.

ರಜನಿಕಾಂತ್ ಅವರ 170 ನೇ ಚಿತ್ರಕ್ಕೆ ನಟ ಹಾಗೂ ನಿರ್ಮಾಪಕ ಧನುಷ ಅವರು ನಿರ್ದೇಶನ ಮಾಡಲಿದ್ದಾರೆ.

ಇನ್ನು ಹಿಂದಿ ಸಿನಿಮಾಗಳಲ್ಲಿ ಬ್ಯುಝಿ ಇರುವ ದೀಪಿಕಾ ಪಡುಕೋಣೆ ಅವರು ಸೌತ್ ಸಿನಿಮಾಗಳಲ್ಲಿಯೂ ನಟಿಸಲು ಮನಸ್ಸು ಮಾಡಿದ್ದಾರೆ. ಈಗಾಗಲೇ ಪ್ರಭಾಸ್ ಜೊತೆಗಿನ ಒಂದು ಚಿತ್ರಕ್ಕೆ ಅವರು ಕಾಲ್ ಶೀಟ್ ನೀಡಿದ್ದಾರೆ. ಇದೀಗ ರಜನಿ ಚಿತ್ರಕ್ಕೂ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.