ಅಪಘಾತದಲ್ಲಿ ಯುವಕನ ಬ್ರೈನ್‌ ಡೆಡ್‌ : ಅಭಿಮಾನಿಯ ಆಸೆಯಂತೆ ʼಆಸ್ಪತ್ರೆಗೆ ಬಂದ ಧುವ ಸರ್ಜಾʼ

ಅಪಘಾತದಲ್ಲಿ ಯುವಕನ ಬ್ರೈನ್‌ ಡೆಡ್‌ : ಅಭಿಮಾನಿಯ ಆಸೆಯಂತೆ ʼಆಸ್ಪತ್ರೆಗೆ ಬಂದ ಧುವ ಸರ್ಜಾʼ

ಬೆಂಗಳೂರು : ಕನ್ನಡ ಆಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿಮಾನಿ, ಅಪಘಾತದಲ್ಲಿ ಗಾಯಗೊಂಡ ಯುವಕನೊಬ್ಬ ಧ್ರುವ ಸರ್ಜಾ ನೋಡಲು ಆಸೆ ಪಟ್ಟಿದ್ದಾನೆಂಬ ಪೋಷಕರ ಕರೆ ಸುದ್ದಿ ತಿಳಿದು ಓಡೋಡಿ ಬಂದು ಮಾನವೀಯತೆ ಮೆರೆದ್ದಾರೆ.

ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಪೃಥ್ವಿರಾಜ್‌ ಬ್ರೈನ್‌ ಡೆಡ್‌ ಆಗಿದ್ದು, ಬೆಂಗಳೂರಿನ ಎಂ.ಎಸ್. ರಾಮಯ್ಯ ಮೇಮೊರಿಯಲ್ ಆಸ್ಪತ್ರೆಗೆ ದಾಖಲಾಗಿದ್ದು, ಪೋಷಕರು ಅಂಗಾಂಗ ದಾನ ಮಾಡಲು ಪೋಷಕರು ನಿರ್ಧಾರಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿಮಾನಿಯ ಆಸೆಯಂತೆ ಆಸ್ಪತ್ರೆಗೆ ಬಂದ ಧುವ ಸರ್ಜಾ ಭೇಟಿ ನೀಡಿ ಮಾತನಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದಯವಿಟ್ಟು ಹೆಲ್ನೆಟ್ ಧರಿಸಿ. ನನ್ನ ಅಜ್ಜಿನ ಆಸ್ಪತ್ರೆಯಲ್ಲಿ ನೋಡಿದ ಮೇಲೆ ಇನ್ಮುಂದೆ ಆಸ್ಪತ್ರೆಗೆ ಹೋಗೋದು ಬೇಡ ಅಂದೊಕೊಂಡಿದ್ದೆ. ಆದರೆ, ಈಗ ಬಂದೆ' ಎಂದಿದ್ದಾರೆ ಯುವಕನ ಕುಟುಂಬಸ್ಥರಿಗೆ ಸಾಂತ್ವಾನ ನೀಡಿದ್ದಾರೆ.