ಎಲ್ಲ ವಿಚಾರಕ್ಕೂ ಪ್ರತಿಕ್ರಿಯೆ ನೀಡುತ್ತಿದ್ದ ಡಿಕೆಶಿ ಈಗ ಬಾಯಿ ಬಿಡ್ತಿಲ್ಲ: ಕೆ.ಎಸ್ ಈಶ್ವರಪ್ಪ ಟೀಕೆ

ಬಳ್ಳಾರಿ: ಡಿ.ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಡಿ.ಕೆ ಶಿವಕುಮಾರ್ ಎಲ್ಲ ವಿಚಾರಕ್ಕೂ ಪ್ರತಿಕ್ರಿಯೆ ನೀಡುತ್ತಾರೆ , ಈಗ ಈ ವಿಚಾರಕ್ಕೆ ಯಾಕೆ ಸುಮ್ಮನಿದ್ದಾರೆ?
ನೂರು ರೂಪಾಯಿ ತೆಗೆದುಕೊಂಡು ಬ್ಲೂ ಫಿಲ್ಮ್ ತೋರಿಸ್ತಾ ಇದ್ದ ವ್ಯಕ್ತಿ ಇವತ್ತು ಸಾವಿರಾರು ಕೋಟಿ ಒಡೆಯ ಆಗಿದ್ದಾರೆ ಅಂತಾ ಜಾರಕಿಹೊಳಿ ಹೇಳಿದ್ದಾರೆ. ಆ ಆಸ್ತಿ ಎಲ್ಲಿಂದ ಬಂತು? ಬೇರೆ ಅವರ ಬಗ್ಗೆ ಟೀಕೆ ಮಾಡ್ತಿದ್ದ ಡಿಕೆಶಿ ಯಾಕೆ ಈಗ ಬಾಯಿ ಬಿಡ್ತಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ. ಡಿಕೆ ಶಿವಕುಮಾರ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.