ಅಬಕಾರಿ ಇಲಾಖೆಯ ನಿಯಮಕ್ಕೆ ಕ್ಯಾರೆ ಎನ್ನದ ಯಶಸ್ ವೈನ್ಸ್ | Gundlupete |
ಅಬಕಾರಿ ಇಲಾಖೆಯ ನಿಯಮವನ್ನು ಗಾಳಿಗೆ ತೂರಿದ ಮದ್ಯ ಮಾರಾಟ ಮಳಿಗೆಯು ಬೆಳೆಗ್ಗೆ 10 ಘಂಟೆಗೆ ತೆರೆಯಬೇಕಿದ್ದ ಮಳಿಗೆಯನ್ನು ಬೆಳಿಗ್ಗೆ 9ಕ್ಕೆ ಓಪನ್ ಮಾಡಿದೆ. ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಇರುವ ಯಶಸ್ ವೈನ್ಸ್ 9.ಗಂಟೆಗೆ ಕ್ಕೆ ತೆರೆದು ಮದ್ಯವನ್ನು ಮಾರಾಟ ಮಾಡಿದೆ. ತಮಗಿಷ್ಟ ಬಂದಂತೆ ಅಂಗಡಿ ಬಾಗಿಲು ತೆರೆದು ಮದ್ಯ ಮಾರಾಟ ಮಾಡುವುದಾದರೆ ಹಾಗಾದ್ರೆ ಸರ್ಕಾರದ ಮಾರ್ಗಸೂಚಿಗೆ ಬೆಲೆ ಇಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಅಬಕಾರಿ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.