ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜಿಪಿಗೆ ಸೇರ್ಪಡೆ

ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜಿಪಿಗೆ ಸೇರ್ಪಡೆ

ಬೀದರ್: ದಕ್ಷಿಣ ವಿಧಾನಸಭಾ ಕ್ಷೇತ್ರದ ಬಂಬೂಳಗಿ ಗ್ರಾಮದ ಯುವಕರು ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಕೆಎಸ್‌ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಹಾಗೂ ಮಂಡಲದ ಅಧ್ಯಕ್ಷ ರಾಜರೆಡ್ಡಿ ಶಹಾಬಾದ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಶೈಲೇಂದ್ರ ಬೆಲ್ದಾಳೆ ಮಾತನಾಡಿ ಬಿಜೆಪಿ ಅಧಿಕಾರದಲ್ಲಿ ರಾಜ್ಯದಾದ್ಯಂತ ಆಗುತ್ತಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಬರುತ್ತಿದ್ದಾರೆ ಎಂದರು.

ಪ್ರಮುಖರಾದ ಷನ್ಮುಖಪ್ಪ ಶೇಖಾಪೂರ, ರವಿ ಬಾಲೇಬಾಯಿ, ಶಿವು ದೇಶಪಾಂಡೆ, ವೀರಶೆಟ್ಟಿ ಮೂಲಗಿ, ರಾಹುಲ್ ಅಷ್ಟೂರ, ಈರಪ್ಪ ಪೂಜಾರಿ, ನೀಲಕಂಠ, ರವಿ ಯಾಕತಪೂರ ಗಣೇಶ ಅರ್ಕಿ, ಜಗನ್ನಾಥ್, ರಘುನಾಥ್, ನಿರಂಜನ್, ಲೋಕೇಶ ಅನಿಲ್ ಶಿವಶರಣಪ್ಪ ಔಂಟಿ, ಸಿದ್ದು , ಪ್ರಶಾಂತ, ಭಿಮಷಾ, ಸುಧೀರ, ಈರಣ್ಣ, ಸುಭಾಷ್, ಪ್ರಭು ಅಮರ ಇದ್ದರು.