ಕುಮಾರಸ್ವಾಮಿ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ನಮ್ಮದು ಸಾಮೂಹಿಕ ನಾಯಕತ್ವ: ಡಿ.ಕೆ ಶಿವಕುಮಾರ್‌

ಕುಮಾರಸ್ವಾಮಿ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ನಮ್ಮದು ಸಾಮೂಹಿಕ ನಾಯಕತ್ವ: ಡಿ.ಕೆ ಶಿವಕುಮಾರ್‌

ಬೆಂಗಳೂರು: ಪ್ರಹ್ಲಾದ್‌ ಜೋಶಿ ಸಿಎಂ ಮಾಡಲು ಆರ್‌ ಎಸ್‌ ಎಸ್‌ ಹುನ್ನಾರ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕುಮಾರಸ್ವಾಮಿ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ಗೊತ್ತಿಲ್ಲ.

ನಮ್ಮದು ಸಾಮೂಹಿಕ ನಾಯಕತ್ವ ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಾತ್ಯತೀತ ಜನತಾ ದಳ ಪಕ್ಷದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಏನು ಮಾತನಾಡುತ್ತಿದ್ದಾರೋ ಅವರಿಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಹಾಗೂ ಸಾವರ್ಕರ್‌ ನಡುವೆ ಚುನಾವಣೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಳಿನ್‌ ಕುಮಾರ್‌ ಕಟೀಲು ಹೇಳಿಕೆಗೆ ಡಿ.ಕೆ ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ. ಕಟಿಲ್‌ ಎಷ್ಟು ಹತಾಶರಾಗಿದ್ದಾರೆ ಎಂಬುದಕ್ಕೆ ಇದೆ ಉದಾಹರಣೆಯಾಗಿದೆ. ಬದುಕು ಮತ್ತು ಭಾವನೆ ಎಂಬ ನಾವು ಮೊದಲೇ ಹೇಳಿದದ್ದೇವೆ. ನಳಿನ್‌ ಕುಮಾರ್‌ ಕಟೀಲ್‌ ಸರ್ಕಾರದ ಸಾಧನೆ ಬಗ್ಗೆ ಹೇಳುಲು ಹೊರಟಿದ್ದಾರೆ. ಸಾಹುಕಾರ್‌ ನಾದ್ರೂ ಇಟ್ಟುಕೊಳ್ಳಲಿ, ಸಾವರ್ಕರ್ನಾದ್ರೂ ಇಟ್ಟುಕೊಳ್ಳಲಿ. ಯಾರ ಫೋಟೋನಾದ್ರೂ ಇಟ್ಟುಕೊಂಡು ಎಲೆಕ್ಷನ್‌ ಮಾಡಲಿ. ಆದರೆ ಮುಂದೆ ಈ ಬಿಲ್ಡಿಂಗ್‌ ನಲ್ಲಿ ಭ್ರಷ್ಟಾಚಾರವಿಲ್ಲದೆ ಅಸರ್ಕಾರ ನಡೆಸುತ್ತೇವೆ ಎಂದರು.