ಗಂಡನ ವಿರುದ್ಧವೇ ರೇಪ್ ಕೇಸ್ ಹಾಕಲು ಮುಂದಾದ ಚೈತ್ರಾ ಕೋಟೂರ್

ಬೆಂಗಳೂರು: ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರಾ ಕೋಟೂರ್ ಇಂದು ತನ್ನ ಗಂಡನ ವಿರುದ್ಧವೇ ರೇಪ್ ಕೇಸ್ ದಾಖಲು ಮಾಡುವಂತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿವುದಾಗಿ ಪತಿ ನಾಗಾರ್ಜುನ್ ವಿರುದ್ಧ ಆರೋಪ ಮಾಡಿ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಚೈತ್ರಾ ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಗಾರ್ಜುನ್ ಮತ್ತು ಕುಟುಂಬಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಚೈತ್ರಾ ಒತ್ತಾಯಿಸಿದ್ದಾರೆ. ಈ ದೂರಿನ ಅಧಾರದ ಮೇಲೆ ಪತಿ ಮತ್ತು ಕುಟುಂಬಸ್ಥರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಹಿಂದೆಯೂ ಸಹ ಚೈತ್ರಾ ಮತ್ತು ನಾಗಾರ್ಜುನ್ ದಂಪತಿ ಮದುವೆ ಆಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ಈ ವೇಳೆ ಬಲವಂತವಾಗಿ ಬೆದರಿಸಿ ಚೈತ್ರಾ ನನ್ನ ಬಳಿ ತಾಳಿಕಟ್ಟಿಸಿಕೊಂಡಿದ್ದಾರೆ ಎಂದು ನಾಗಾರ್ಜುನ್ ದೂರಿದ್ದರು.