ಪಾತಾಳಕ್ಕಿಳಿದ ಈರುಳ್ಳಿ ಬೆಲೆ

ಪಾತಾಳಕ್ಕಿಳಿದ ಈರುಳ್ಳಿ ಬೆಲೆ

ಈ ವರ್ಷದ ಅತಿವೃಷ್ಠಿಯಿಂದ ಗದಗ ಜಿಲ್ಲೆ ರೈತರು ಕಂಗಾಲಾಗಿದ್ದಾರೆ. ಗದಗ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ ಅಂತ ಬೆಂಗಳೂರು ಮಾರುಕಟ್ಟೆಗೆ ಹೋದರೂ ಸಂಕಷ್ಟ ತಪ್ಪುತ್ತಿಲ್ಲ. ಖರ್ಚು‌ ಮಾಡಿದ ಅಸಲೂ ಸಹ ತಿರುಗಿ ಬಂದಿಲ್ಲ. ಸೂಕ್ತ ಬೆಂಬಲ ಬೆಲೆ ಕಲ್ಪಸಿಕೊಡಿ ಅಂತಿದ್ದಾರೆ ಈರುಳ್ಳಿ ಬೆಳೆದ ರೈತರು. ಕ್ವಿಂಟಲ್​​ಗೆ 50 ರೂ. 100 ರೂ., 200 ರೂ. ರೇಟ್ ಸಿಕ್ಕಿದೆ. ಅನ್ಯ ರಾಜ್ಯದ ಈರುಳ್ಳಿ ಮುಂದೆ ನಾವು ಬೆಳೆದ ಈರುಳ್ಳಿಗೆ ದರ ಸಿಗುತ್ತಿಲ್ಲ ಅಂತ ರೈತ ಅಳಲು ತೋಡಿಕೊಂಡಿದ್ದಾನೆ.