ಬ್ಬರು ಮಾವೋವಾದಿ ನಾಯಕರನ್ನು ಬಂಧಿಸಿದ ಎಟಿಎಸ್
ಕೇರಳದ ಸಿಪಿಐ (ಮಾವೋವಾದಿ) ಉಗ್ರಗಾಮಿ ವಿಭಾಗವಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ) ಮುಖ್ಯಸ್ಥ ಸೇರಿದಂತೆ ಇಬ್ಬರು ಮಾವೋವಾದಿ ನಾಯಕರನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಮತ್ತು ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತು ಕಬನಿದಳಂ ಕೇಡರ್ ಸಾವಿತ್ರಿ ಅವರನ್ನು ಸೋಮವಾರ ಬೆಳಗ್ಗೆ ಎಟಿಎಸ್ ವಶಪಡಿಸಿಕೊಂಡಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯದ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಇವರಿಬ್ಬರ ವಿರುದ್ಧ ಹಲವು ಪ್ರಕರಣಗಳಿವೆ. ಕೃಷ್ಣಮೂರ್ತಿ ಚಿಕ್ಕಮಗಳೂರಿನ ಶೃಂಗೇರಿ ತಾಲೂಕು ನೆಮ್ಮಾರ್ ಎಸ್ಟೇಟಿನ ಭೀಮನರಸಲು ಭಾಗದವರಾಗಿದ್ದಾರೆ, ಮಾವೋವಾದಿ ಪಕ್ಷದ ಕೇಂದ್ರ ಸಮಿತಿಯ ಸದಸ್ಯ ಮತ್ತು ಪಶ್ಚಿಮದ ಕಾರ್ಯದರ್ಶಿಯಾಗಿದ್ದಾನೆ. ಸಾವಿತ್ರಿ ಮೂಡಿಗೆರೆ ತಾಲೂಕಿನವಳಾಗಿದ್ದು ಕಬಿನಿ ದಳದ ಕಮಾಂಡರ್ ಆಗಿದ್ದಳು ಎನ್ನಲಾಗಿದೆ,