ಸ್ಯಾಂಟ್ರೋ ರವಿ ಆಪ್ತ ಖಾಕಿ ವಶಕ್ಕೆ

ಸ್ಯಾಂಟ್ರೋ ರವಿ ಆಪ್ತ ಖಾಕಿ ವಶಕ್ಕೆ

ಮೈಸೂರು: ಉದ್ಯಮಿ ಸ್ಯಾಂಟ್ರೋ ರವಿ ವಿರುದ್ದ ದಾಖಲಾದ ವಂಚನೆ ಪ್ರಕರಣ ಸಂಬಂಧ ಸ್ಯಾಂಟ್ರೋ ರವಿ ಆಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಗೆ ಮತ್ತು ಬರಿಸುವ ಔಷಧಿ ಬೆರೆಸಿದ್ದ ಆರೋಪದ ಮೇಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸರ ತಂಡ ರವಿ ಆಪ್ತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸ್ಯಾಂಟ್ರೋ ರವಿಗೆ ಮಹಿಳೆಯ ಜೊತೆ ಮದುವೆ ಮಾಡಿಸಿದ್ದ ಪುರೋಹಿತನನ್ನು ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.