ಇಂದ್ರಾಳಿ ರೈಲ್ವೆ ಸೇತುವೆ ಬಳಿ ಹದಗೆಟ್ಟ ಹೆದ್ದಾರಿ: ರಸ್ತೆ ದುರಸ್ತಿಗೆ ಆಗ್ರಹ

ಇಂದ್ರಾಳಿ ರೈಲ್ವೆ ಸೇತುವೆ ಬಳಿ ಹದಗೆಟ್ಟ ಹೆದ್ದಾರಿ: ರಸ್ತೆ ದುರಸ್ತಿಗೆ ಆಗ್ರಹ

ಮಣಿಪಾಲ : ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ರೈಲು ಸೇತುವೆ ಬಳಿ ಹೊಂಡ ಗುಂಡಿಗಳಿಂದ ಇಡೀ ರಸ್ತೆ ಹದಗೆಟ್ಟು ಹೋಗಿದ್ದು, ಕೃತಕ ಈಜುಕೊಳವೇ ನಿರ್ಮಾಣವಾಗಿದೆ.

ಇಂದ್ರಾಳಿ ರೈಲ್ವೆ ಸೇತುವೆ ಬಳಿ ಇನ್ನೊಂದು ಬದಿ ಸೇತುವೆ ನಿರ್ಮಾಣವಾಗು ತ್ತಿರುವುದರಿಂದ ಈ ಭಾಗದಲ್ಲಿ ಇನ್ನು ರಸ್ತೆ ಅಗಲೀಕರಣ ಆಗಿಲ್ಲ. ಇದೀಗ ಮಳೆ ಯಿಂದ ಈ ರಸ್ತೆ ಕೆಸರುಮಯವಾಗಿದ್ದು, ಹೊಂಡಗಳಿಂದ ಸಂಚಾರ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇದರ ಪರಿಣಾಮ ಈ ಪ್ರದೇಶ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಬೈಕ್ ಸವಾರರು ಹೊಂಡದಲ್ಲಿ ಎಡವಿ ಬಿದ್ದಿರುವ ಬಹಳ ಘಟನೆಗಳು ಇಲ್ಲಿ ನಡೆದಿದೆ. ಪಾದಚಾರಿಗಳಂತೂ ಇಲ್ಲಿ ನಡೆಯಲು ಹರಸಾಹಸ ಪಡಬೇಕಾಗಿದೆ. ಮಳೆ ಯಿಂದ ಹೊಂಡದಲ್ಲಿ ಸಂಗ್ರಹವಾಗಿರುವ ಕೆಸರು ನೀರು ವಾಹನಗಳ ಚಕ್ರದ ಚಲನೆಗೆ, ಪಾಚಾರಿಗಳ ಮೈಮೇಲೆ ಎರಚುತ್ತಿದೆ.

ಹೊಂಡ ಗುಂಡಿಗಳಿಂದ ಇಲ್ಲಿ ವಾಹನಗಳ ನಿಧಾನವಾಗಿ ಸಂಚರಿಸಬೇಕಾಗು ತ್ತದೆ. ಇದರಿಂದ ಇಲ್ಲಿ ವಾಹನ ದಟ್ಟನೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಜೀವರಕ್ಷಕ ಅಂಬುಲೆನ್ಸ್ ವಾಹನಗಳು ಕೂಡ ಆಮೆ ನಡಿಗೆಯಲ್ಲಿ ಸಂಚರಿಸ ಬೇಕಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಅಲ್ಲದೆ ರಾತ್ರಿ ವೇಳೆ ಇಂದ್ರಾಳಿ ಪರಿಸರದಲ್ಲಿ ಹೆದ್ದಾರಿ ಉದ್ದಕ್ಕೂ ದಾರಿದೀಪದ ವ್ಯವಸ್ಥೆಯೂ ಇಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತವು ತಕ್ಷಣವಾಗಿ ಹೆದ್ದಾರಿ ದುರಸ್ತಿಗೊಳಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯ ಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿ ದ್ದಾರೆ. ತಡವರಿಸಿದರೆ ಸಂಘ ಸಂಸ್ಥೆಗಳ ನೆರವಿನೊಂದಿಗೆ ಉಗ್ರ ರೀತಿಯಲ್ಲಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.