ಪಾಕಿಸ್ತಾನದ ಪ್ರವಾಹ ಪೀಡಿತರಿಗೆ ಆಶ್ರಯ ನೀಡಿದೆ ಹಿಂದೂ ದೇವಾಲಯ

ಪಾಕಿಸ್ತಾನದ ಪ್ರವಾಹ ಪೀಡಿತರಿಗೆ ಆಶ್ರಯ ನೀಡಿದೆ ಹಿಂದೂ ದೇವಾಲಯ

ಪಾಕಿಸ್ತಾನದಲ್ಲಿ ಭೀಕರ ಪ್ರವಾಹದಿಂದ ಹೈರಾಣಾಗಿರುವ ಜನರಿಗೆ ಹಿಂದೂ ದೇವಾಲಯದಲ್ಲಿ ಆಶ್ರಯ ದೊರಕಿದೆ. ಬಲೂಚಿಸ್ತಾನದ ಪುಟ್ಟ ಹಳ್ಳಿ ಜಲಾಲ್ ಖಾನ್ ನ ಬಾಬಾ ಮಧೋದಾಸ್ ಮಂದಿರದಲ್ಲಿ ಸುಮಾರು 300 ಕ್ಕೂ ಹೆಚ್ಚು ಪ್ರವಾಹ ಪೀಡಿತರಿಗೆ ಆಹಾರ ಮತ್ತು ಆಶ್ರಯ ನೀಡಲಾಗಿದೆ.

ಎತ್ತರದ ಭೂಪ್ರದೇಶದಲ್ಲಿ ಮಂದಿರವಿದ್ದು, ಪ್ರವಾಹದಿಂದ ಸುರಕ್ಷಿತವಾಗಿದ್ದು, ಜನರಿಗೆ ಸಧ್ಯದ ಆಶ್ರಯ ತಾಣವಾಗಿದೆ. ನಾರಿ, ಬೋಲನ್ ಹಾಗೂ ಲೆಹ್ರಿ ನದಿಗಳಲ್ಲಿ ಪ್ರವಾಹವಾಗಿದ್ದು, ಉಳಿದ ಭಾಗಗಳಿಗೆ ಸಂಪರ್ಕ ಕಡಿತವಾಗಿದೆ.

ಈ ಕಾರಣದಿಂದ ಸ್ಥಳೀಯರಿಗೆ ಹಿಂದೂ ದೇವಾಲಯವು ಪ್ರವಾಹ ಪೀಡಿತರು ಹಾಗೂ ಜಾನುವಾರುಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಬಾಬಾ ಮಧೋದಾಸ್ ಹಿಂದೂ ಸಂತರು, ಹಿಂದೂಗಳು ಹಾಗೂ ಮುಸ್ಲಿಮರು ಇವರನ್ನು ಆರಾಧಿಸುತ್ತಾರೆ. ಜಾತಿ, ಧರ್ಮಕ್ಕಿಂತ ಹೆಚ್ಚಾಗಿ ಮಾನವೀಯತೆಗೆ ಇಲ್ಲಿ ಬೆಲೆಯಿದೆ. ಆಗಾಗ ಹಿಂದೂಗಳು ಪೂಜಾಸ್ಥಳಕ್ಕೆ ಬರುತ್ತಾರೆ. ಕಾಂಟ್ರಿಕ್‌ನಿಂದ ಮಂದಿರ ನಿರ್ಮಾಣವಾಗಿದ್ದು, ವಿಶಾಲವಾಗಿಯೂ ಇದೆ.

ಪ್ರವಾಹ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಸ್ಥಳೀಯ ಹಿಂದೂ ಸಮುದಾಯಕ್ಕೆ ಕೃತಜ್ಞರಾಗಿದ್ದೇವೆ ಎಂದು ಅಲ್ಲಿ ನೆಲೆಸಿದ ಜನರು ಹೇಳುತ್ತಿದ್ದಾರೆ. ಈಗಾಗಲೇ ಪ್ರವಾಹದಲ್ಲಿ 1,400ಜನರು ಮೃತಪಟ್ಟಿದ್ದಾರೆ.