ಅಧಿವೇಶನದಲ್ಲಿ ಗದ್ದಲ, ಬಹಿಷ್ಕಾರಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದೇವೆ; ಹೊರಟ್ಟಿ

ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳು ಕುರಿತು ಚರ್ಚಿಸುವಂತೆ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದೇವೆ. ಈ ಸಂಬಂಧ ಎಲ್ಲಾ ಪಕ್ಷಗಳ ಸಭಾನಾಯಕರು, ಮುಖಂಡರ‌ ಸಭೆ ನಡೆಸಲಾಗಿದೆ. ‌ಕಾಂಗ್ರೆಸ್‌ನ ಎಸ್‌ಆರ್‌ ಪಾಟೀಲ್ ಗೈರಾಗಿದ್ದರು. ಅಧಿವೇಶನದಲ್ಲಿ ಗದ್ದಲ, ಬಹಿಷ್ಕಾರಕ್ಕೆ ಅವಕಾಶ ಕೊಡದೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದೇವೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಅಧಿವೇಶನದಲ್ಲಿ ಗದ್ದಲ, ಬಹಿಷ್ಕಾರಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದೇವೆ; ಹೊರಟ್ಟಿ
ಹುಬ್ಬಳ್ಳಿ: ಕರ್ನಾಟಕದಲ್ಲಿ ಇಂದು ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯ ಮತದಾನದಲ್ಲಿ ವಿಧಾನ ಪರಿಷತ್ ಸಭಾಪತಿ ತಮ್ಮ ಹಕ್ಕು ಚಲಾಯಿಸದರು. ಮತದಾನದ ಬಳಿಕ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳು ಕುರಿತು ಚರ್ಚಿಸುವಂತೆ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದೇವೆ. ಈ ಸಂಬಂಧ ಎಲ್ಲಾ ಪಕ್ಷಗಳ ಸಭಾನಾಯಕರು, ಮುಖಂಡರ‌ ಸಭೆ ನಡೆಸಲಾಗಿದೆ. ‌ಕಾಂಗ್ರೆಸ್‌ನ ಎಸ್‌ಆರ್‌ ಪಾಟೀಲ್ ಗೈರಾಗಿದ್ದರು. ಅಧಿವೇಶನದಲ್ಲಿ ಗದ್ದಲ, ಬಹಿಷ್ಕಾರಕ್ಕೆ ಅವಕಾಶ ಕೊಡದೆ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದೇವೆ ಎಂದರು. ಅಧಿವೇಶನದಲ್ಲಿ ಪ್ರಶ್ನೋತ್ತರಗಳಿಗೆ ಅವಕಾಶವಿದೆ. ಸದನವನ್ನು ಸಂಪೂರ್ಣಗೊಳಿಸಬೇಕೆಂಬುದು ನಮ್ಮ ಆಶಯವಾಗಿದೆ. ಚರ್ಚೆಗೆ ಬರುವ ವಿಷಯಗಳ ಬಗ್ಗೆ ಸುದೀರ್ಘ ಅವಲೋಕನ ಮಾಡುವಂತೆ ಸಲಹೆ ಮಾಡಿದ್ದೇವೆ ಎಂದು ತಿಳಿಸಿದರು. ಸದಸ್ಯರ ಚರ್ಚೆಗೆ ಹೆಚ್ಚಿನ ಸಮಯ ವ್ಯಯ ಮಾಡುವ ಉದ್ದೇಶ ಹೊಂದಿದ್ದು, ಸಹಕಾರ ನೀಡುವಂತೆ ಎಲ್ಲರನ್ನೂ ಕೇಳಿಕೊಳ್ಳಲಾಗಿದೆ ವಿಷಯಾಧಾರಿತ ಚರ್ಚೆ ಮಾಡಬೇಕು ಅಂತ ಮನವಿ ಮಾಡಿದ್ದೇವೆ ಎಂದು ಹೇಳಿದರು. ಅಧಿವೇಶನದಲ್ಲಿ ವಿಧೆಯಕಗಳ ಪ್ರಸ್ತಾಪ ಕುರಿತು ಪ್ರಶ್ನೆಗೆ‌ ಪ್ರತಿಕ್ರಿಯಿಸಿದ ಸಭಾಪತಿ ಹೊರಟ್ಟಿಯವರು, ನಿನ್ನೆಯ(ಗುರುವಾರ ಡಿ.9)ವರೆಗೂ ಒಂದೇ ವಿಧೇಯಕ ಬಂದಿಲ್ಲ. ಸಾಮಾನ್ಯವಾಗಿ ಅಧಿವೇಶನಕ್ಕೆ 5 ದಿನ ಮುಂಚಿತವಾಗಿಯೇ ವಿಧೇಯಕಗಳ ಮಾಹಿತಿ ಅಧಿಕೃತವಾಗಿ ಬರಬೇಕು. ದುರದೃಷ್ಟಕರ ಇನ್ನೂ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಈ ಸಂಬಂಧ ಮುಖ್ಯಮಂತ್ರಿಗೆ, ವಿಪಕ್ಷ ನಾಯಕರಿಗೆ ಈ ಬಗ್ಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಈ ಹಿಂದೆ ಅಧಿವೇಶನ ನಡೆಯುವಾಗ ಕೇವಲ 20 ನಿಮಿಷ ಇರುವಾಗ ವಿಧೇಯಕ ಮಂಡಿಸಲಾಯಿತು. ಯಾವುದೇ ಚರ್ಚೆ ಇಲ್ಲದೆ ೨೯ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮೋದನೆ ನೀಡಲಾಯಿತು ಎಂದು ಕಳವಳ ವ್ಯಕ್ತಪಡಿಸಿದರು. ಐವರಿಗೆ ಪ್ರಾಶಸ್ತ್ಯ ಮತ ಒಂದಕ್ಕಿಂತ ಹೆಚ್ಚು ಮತ ಹಾಕುವ ಅವಕಾಶ ಕೆಲವೇ ಚುನಾವಣೆಗೆ ಇರುತ್ತೆ. ಈ ಚುನಾವಣೆಯಲ್ಲಿ 5 ಜನರಿಗೆ ಪ್ರಾಶಸ್ಥ್ಯದ ಮತ ಹಾಕಬಹುದು. ನನ್ನ ವಿವೇಚನೆಗೆ ತಕ್ಕಂತೆ ಮತ ಹಾಕಿದ್ದೇನೆ ಎಂದರು.