ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ: ನಾಪತ್ತೆಯಾಗಿದ್ದ ʼಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್‌ ಪತ್ತೆʼ

ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ: ನಾಪತ್ತೆಯಾಗಿದ್ದ ʼಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್‌ ಪತ್ತೆʼ

ಕಳೆದ ಸೋಮವಾರ ನಡೆದ ಪ್ರಬಲ ಭೂಕಂಪನದಿಂದ ಟರ್ಕಿ, ಸಿರಿಯಾ ತತ್ತರರಿದ್ದು, ಹೋಟೆಲ್‌ ಅವಶೇಷಗಳಡಿಯಲ್ಲಿ ನಾಪತ್ತೆಯಾಗಿದ್ದ ಭಾರತೀಯರ ಪಾಸ್‌ಪೋರ್ಟ್‌ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಪೂರ್ವ ಟರ್ಕಿಯ ಅನಾಟೋಲಿಯಾ ಪ್ರದೇಶದ ಮಲತ್ಯದಲ್ಲಿರುವ ಅವಸರ್ ಹೋಟೆಲ್‌ನ ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಬೆಂಗಳೂರು ಮೂಲದ ಟೆಕ್ಕಿ ವಿಜಯ್ ಕುಮಾರ್ ಪಾಸ್‌ಪೋರ್ಟ್ ಪತ್ತೆಯಾಗಿದೆ

24 ಅಂತಸ್ತಿನ ಅವಸರ್ ಹೋಟೆಲ್‌ನ ಎರಡನೇ ಮಹಡಿಯಲ್ಲಿ ವಿಜಯ್ ಕುಮಾರ್ ತಂಗಿದ್ದ ಎನ್ನಲಾಗಿದ್ದು, ಅವರ ಪಾಸ್‌ಪೋರ್ಟ್ ಜೊತೆಗೆ ಕೆಲವು ವಸ್ತುಗಳು ಲಭ್ಯವಾಗಿವೆ. ಕಟ್ಟಡ ತೆರವು ಕಾರ್ಯಚರಣೆ ವೇಳೆ ವಸ್ತುಗಳು ಹೊರೆತು ಯಾವುದೇ ಮೃತದೇಹಗಳು ಪತ್ತೆಯಾಗಿಲ್ಲ ಎಂದು ತಿಳಿಯಲಾಗಿದೆ

ಬೆಂಗಳೂರು ಮೂಲದ ಕಂಪನಿಯ ಉದ್ಯೋಗಿ ಉದ್ಯೋಗ ನಿಮಿತ್ತ ಟರ್ಕಿಗೆ ವಿಜಯ್‌ ತೆರಳಿದ್ದರು , ಅವರು ಪತ್ತೆಗಾಗಿ ಭಾರೀ ಶೋಧಕಾರ್ಯಚಾರಣೆ ನಡೆಸಲಾಗುತ್ತಿದೆ. ವಿಜಯ್ ಕುಮಾರ್ ಇನ್ನು ಜೀವಂತವಾಗಿರಬಹುದು ಎಂದು ಭರವಸೆ ಕುಟುಂಬಸ್ಥರಲ್ಲಿದೆ.