ಮೋದಿ ಕಾರ್ಯಕ್ರಮಕ್ಕೆ ಹರಿದು ಬರುತ್ತಿರುವ ಜನ

ಮೋದಿ ಕಾರ್ಯಕ್ರಮಕ್ಕೆ ಹರಿದು ಬರುತ್ತಿರುವ ಜನ

ಲಬುರಗಿ: ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಕಾರ್ಯಕ್ರಮಕ್ಕೆ ಸಾವಿರಾರು ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಬೀದರ್, ವಿಜಯಪುರ, ರಾಯಚೂರು, ಯಾದಗಿರಿ ಸೇರಿದಂತೆ ಕಲಬುರಗಿಯ ವಿವಿಧ ತಾಲ್ಲೂಕು, ನಗರದಿಂದ ಬಸ್, ಕ್ರೂಸರ್, ಕಾರುಗಳಲ್ಲಿ ಬರುತ್ತಿದ್ದಾರೆ.

ಲಂಬಾಣಿ ಸಮುದಾಯದ ಬಹುತೇಕ ಮಹಿಳೆಯರು ತಮ್ಮ ಸಂಪ್ರದಾಯಿಕ ಉಡಿಗೆ ತೊಟ್ಟು ‌ಪಾಲ್ಗೊಂಡಿದ್ದಾರೆ. ಕೆಲವರು ಭಜನೆ ಮಾಡುತ್ತಾ, ಲಂಬಾಣಿ ಹಾಡುಗಳನ್ನು ಹಾಡುತ್ತಾ ವೇದಿಕೆಯತ್ತ ಬರುತ್ತಿದ್ದಾರೆ. ಮತ್ತೆ ಕೆಲವರು ಪ್ರಧಾನಿ ಮೋದಿ, ಸ್ಥಳೀಯ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರು ಅವರಿಗೆ ಜೈಕಾರ ಹಾಕಿದರು.

ದೂರದ ಜಿಲ್ಲೆಗಳು, ಗ್ರಾಮಗಳಿಂದ ಬಂದವರ ಅನುಕೂಲಕ್ಕಾಗಿ ಬೆಳಿಗ್ಗೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿದೆ. ರೈಸ್ ಬಾತ್, ಮೈಸೂರ್ ಪಾಕ್, ಮಜ್ಜಿಗೆ ನೀಡಲಾಗುತ್ತಿದೆ.

ಕಲಬುರಗಿ ನಗರದಿಂದ ಕಾರ್ಯಕ್ರಮ ನಡೆಯುವ ವೇದಿಕೆಯ ಮಾರ್ಗದ ಅಲ್ಲಲ್ಲಿ ಪೊಲೀಸರನ್ನು‌ ನಿಯೋಜಿಸಲಾಗಿದೆ. ರಸ್ತೆ ಬದಿಯ ಎಲ್ಲ ಅಂಗಡಿ, ಹೋಟೆಲ್, ರೆಸ್ಟೋರೆಂಟ್‌, ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಲಾಗಿದೆ.