ಬೀದಿ ದೀಪದ ಕೆಳಗೆ ಓದಿನಲ್ಲಿ ಮಗ್ನಳಾದ ವಿದ್ಯಾರ್ಥಿನಿ: ವೈರಲ್ ವಿಡಿಯೋ ನೋಡಿ ನೆರವಿಗೆ ಮುಂದಾದ ಜನರು

ನವದೆಹಲಿ: ಒಳ್ಳೆಯ ಶಿಕ್ಷಣದಿಂದ ಮಾತ್ರ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆದರೆ, ಆ ಒಳ್ಳೆಯ ಶಿಕ್ಷಣ ಪಡೆಯುವುದು ಸುಲಭವಲ್ಲ. ಅದು ಎಲ್ಲರಿಗೂ ಲಭಿಸುವುದಿಲ್ಲ. ಒಳ್ಳೆಯ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯಬೇಕೆಂದರೆ, ಹಣ ತುಂಬಾ ಮುಖ್ಯ.
ಹುಡುಗಿಯೊಬ್ಬಳ ಮನೆಯ ಮುಂದಿರುವ ಫುಟ್ಪಾತ್ ಮೇಲೆ ಕುಳಿತು ಬೀದಿ ದೀಪದ ಸಹಾಯದಿಂದ ಓದುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. stutes_zone_987 ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.
ವಾಹನದಲ್ಲಿ ಹೋಗುತ್ತಿದ್ದವರು ವಿಡಿಯೋ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಮಾಡುತ್ತಿದ್ದಾರೆ ಎಂಬ ಅರಿವೇ ಇಲ್ಲದೆ ಓದಿನಲ್ಲಿ ವಿದ್ಯಾರ್ಥಿನಿ ಮಗ್ನರಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆನ್‌ಲೈನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಸುಮಾರು 1 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಕೆಲವರು ಹುಡುಗಿಯ ಕಠಿಣ ಪರಿಶ್ರಮದಿಂದ ಸ್ಫೂರ್ತಿ ಪಡೆದರೆ, ಇತರರು ಅವಳ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳುವ ಮೂಲಕ ಅವಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಕಠಿಣ ಪರಿಶ್ರಮ ಮತ್ತು ಕಠಿಣ ಸಮಯಗಳು ಖಂಡಿತವಾಗಿಯೂ ನಿಮಗೆ ಉತ್ತಮ ಬೆಲೆಯನ್ನು ನೀಡುತ್ತವೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)