ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್-ಜೆಡಿಎಸ್ ನಡುವೆ ವಾರ್; ಹಲವರ ವಿರುದ್ಧ FIR
ಜೆಡಿಎಸ್ನಿಂದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಉಚ್ಚಾಟನೆಗೊಂಡ ನಂತರ ಜಾಲತಾಣದಲ್ಲಿ ಶಾಸಕರ ಬೆಂಬಲಿಗರು & JDS ಬೆಂಬಲಿಗರ ನಡುವೆ ವಾಕ್ಸಮರ ಆರಂಭಗೊಂಡಿದ್ದಲ್ಲದೆ,ಇದೀಗ ತಾರಕಕ್ಕೇರಿದ ವಾಕ್ಸಮರ ಗುಬ್ಬಿ ಠಾಣೆ ಮೆಟ್ಟಿಲೇರಿದೆ. ಉಭಯ ಬೆಂಬಲಿಗರ ನಡುವೆ ಪರಸ್ಪರ ನಿಂದನೆ ಆರೋಪ ಸಂಬಂಧ ಠಾಣೆಯಲ್ಲಿ 10 ಜನರ ಮೇಲೆ FIR ದಾಖಲಾಗಿದೆ. ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮೂವರು ಬೆಂಬಲಿಗರು & ಜೆಡಿಎಸ್ನ 7 ಜನರ ವಿರುದ್ಧ FIR ದಾಖಲಾಗಿದೆ.