ಶಾಲಾ ಶಿಕ್ಷಕರ ಕಿತ್ತಾಟ; ಖಂಡನೆ
ಕಲಘಟಗಿ ತಾಲೂಕಿನ ಕುರವಿನಕೋಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಕಿತ್ತಾಡಿಕೊಂಡ ಘಟನೆಯನ್ನ ಖಂಡಿಸಿ ಶಾಸಕ ಸ್ಥಾನದ ಪರಾಜಿತ ಅಭ್ಯರ್ಥಿ ಶಂಕರ ಹುದ್ದಾರ ಧಾರವಾಡ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿದರು. ಶಾಲೆಯಲ್ಲಿ ಶಿಕ್ಷಕರು ವೈಯಕ್ತಿಕ ವಿಚಾರಕ್ಕೆ ಕಿತ್ತಾಟ ಮಾಡಿಕೊಂಡಿದ್ದಾರೆ. ಆದರೆ ಅದರ ಕುರಿತು ಶಿಕ್ಷಕರಿಂದ ಮಾಹಿತಿ ಪಡೆಯದೇ ಎಸ್ಡಿಎಂಸಿ ಸದಸ್ಯರು ಹಾಗೂ ಊರಿನ ಪ್ರಮುಖರಿಂದ ಮಾಹಿತಿ ಪಡೆದಿರುವುದು ಖಂಡನೀಯ. ಹೀಗಾಗಿ ಕೂಡಲೇ ನೊಂದ ಶಿಕ್ಷಕಿಗೆ ನ್ಯಾಯ ಒದಗಿಸಬೇಕು ಇಲ್ಲವಾದರೆ ಆಮರಣಾಂತ ಉಪವಾಸ ನಡೆಸಲಾಗುತ್ತದೆ ಎಂದು ಶಂಕರ ಹುದ್ದಾರ ಉಪ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ...