ಲಿಕಾಪ್ಟರ್ ದುರಂತದಲ್ಲಿ ಮಡಿದ ಯೋಧರಿಗೆ ಮಾಜಿ ಸೈನಿಕರಿಂದ ಶ್ರದ್ಧಾಂಜಲಿ |Dharwad|
ತಮಿಳುನಾಡಿನ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ ಜನರಲ್ ಬಿಪಿನ್ ರಾವತ್, ಹಾಗೂ ಹನ್ನೆರಡು ಅಧಿಕಾರಿಗಳಿಗೆ ಅಖಿಲ ಕನಾ೯ಟಕ ಮಾಜಿ ಸೈನಿಕರ ಸಂಘ ಧಾರವಾಡದಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು. ನಗರದ ಕಲಾಭವನದಿಂದ, ಜುಬಲಿ ಸಕ೯ಲ್, ಕೋಟ೯ ಸಕ೯ಲ್, ಡಿ ಸಿ ಕಚೇರಿ ಆವರಣದಲ್ಲಿ ಇರುವ ಕಾಗಿ೯ಲ್ ಸ್ತೂಪದ ವರೆಗೆ ಮೇಣದ ಬತ್ತಿ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ನಿಂಗಪ್ಪ ಬಸಪ್ಪ ಸಿಂಗೋಟಿ , ಪರಶುರಾಮಪ್ಪ ಫಕ್ಕೀರಪ್ಪ ನವಲಗುಂದ . ಮುತ್ತಣ್ಣ ಶಿವಪ್ಪ ಶಿರೂರ , ಶಿವಾನಂದ ಬಸಪ್ಪ ಆದಮನಿ , ಕಿಶ ಫಕ್ಕೀರಪ್ಪ ಪಾಶ್ವಾಪುರ , ರೇಗೌಡ ಅಮೃತಗೌಡ ಗದ್ದಿಗೌಡರ , ನರಹರಿ ಅನಂತ ಗಿರಿಭಟ್ಟನವರ, ಮಹಾದೇವಪ್ಪ ಸ ಅಡಕಿ , ರಮೇಶ ಭೀಮಸೇನ ಕೋರೆ , ಬಸಪ್ಪ ಮಲ್ಲಪ್ಪ ಗಾಣಿಗೇರ , ಮಂಜಯ್ಯ ಶಿವಯ್ಯ ಪೂಜಾರ , ಚನ್ನಬಸಪ್ಪ ಮಲ್ಲಪ್ಪ ಉಂಕಿ , ಶ್ರೀನಿವಾಸ ಮಲ್ಲೇಶಪ್ಪ ನಾಗೇಶನವರ ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು.