ಜಾಮೀನು ಪಡೆದು ಹೊರಬಂದವನಿಗೆ ಜೈಲಿನ ಬಾಗಿಲಲ್ಲೇ ಬಿಗ್ ಶಾಕ್

ಜಾಮೀನು ಪಡೆದು ಹೊರಬಂದವನಿಗೆ ಜೈಲಿನ ಬಾಗಿಲಲ್ಲೇ ಬಿಗ್ ಶಾಕ್

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ.

ಸಿಐಡಿಯಿಂದ ಆರೋಪಿ ಸಂಜೀವ ಭಂಡಾರಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನ ಎದುರಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಸಂಜೀವ ಭಂಡಾರಿ ಬೇಲ್ ಮೇಲೆ ಹೊರ ಬರುತ್ತಿದ್ದಂತೆ ಸಿಐಡಿ ಪೊಲೀಸರು ಮತ್ತೆ ಬಂಧಿಸಿದ್ದಾರೆ. 2021 ರ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾದ ಆರೋಪ ಹಿನ್ನೆಲೆಯಲ್ಲಿ ಸಂಜೀವ್ ಭಂಡಾರಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಭಂಡಾರಿಯನ್ನು ಹಾಜರುಪಡಿಸಲಾಗಿದ್ದು, ಆರು ದಿನ ಸಿಐಡಿ ಕಸ್ಟಡಿಗೆ ವಹಿಸಲಾಗಿದೆ.