ರಾಜ್ಯ ಸರ್ಕಾರದ ವಿರುದ್ಧ 'ಕಾಂಗ್ರೆಸ್' ಆರ್ಭಟ: ಟ್ರ್ಯಾಕ್ಟರ್ ಮೂಲಕವೇ ಸುವರ್ಣ ಸೌಧ ಪ್ರವೇಶ
ಸಿಎಂ ಬಸವರಾಜ ಬೊಮ್ಮಾಯಿ ಸುವರ್ಣ ಸೌಧದಲ್ಲಿ ತಮ್ಮ ಮೊದಲ ಅಧಿವೇಶನಕ್ಕೆ ಸಜ್ಜಾಗಿದ್ದರೆ ಕಾಂಗ್ರೆಸ್ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನಾ ರ್ಯಾಲಿ ನಡೆಸಿದರು.
ಟ್ರ್ಯಾಕ್ಟರ್ ಮೂಲಕ ಸುವರ್ಣ ಸೌಧ ಪ್ರವೇಶಕ್ಕೆ ಮುಂದಾದ ಕಾಂಗ್ರೆಸ್ ನಾಯಕರಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆ ನೀಡಿದರು.
ಬ್ಯಾರಿಕೇಡ್ ತಳ್ಳಲು ಮುಂದಾದ ಕಾಂಗ್ರೆಸ್ ನಾಯಕರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಾವು ಸದನ ಒಳಗೂ ಹೋರಾಡುತ್ತೇವೆ, ಹೊರಗೂ ಹೋರಾಡುತ್ತೇವೆ. ಜನರಿಗಾಗಿ ನಮ್ಮ ಹೋರಾಟ ಎಂದಿಗೂ ಇರಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರಯ್ಯ ಕಾಗೇರಿಗೆ ಕರೆ ಮಾಡಿ ಸುರ್ವಣ ಸೌಧ ಪ್ರವೇಶಕ್ಕೆ ಅನುಮತಿ ಕೇಳಿದ್ದಾರೆ. ಟ್ರ್ಯಾಕ್ಟರ್ ಮೂಲಕವೇ ಸುವರ್ಣ ಸೌಧ ಪ್ರವೇಶಿಸಲು ಕಾಗೇರಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್ ನಾಯಕರು ಬರೋಬ್ಬರಿ ಒಂದೂವರೆ ಗಂಟೆಗಳ ಹೈಡ್ರಾಮಾದ ಬಳಿಕ ಸುವರ್ಣ ಸೌಧ ಪ್ರವೇಶಿಸಿದ್ದಾರೆ.