ಕೇಂದ್ರ ಸರ್ಕಾರದಿಂದ ನಕಲಿ ಸುದ್ದಿ ಹರಡಿದ 6 ಯೂಟ್ಯೂಬ್ ಚಾನಲ್ ನಿರ್ಬಂಧ
ನವದೆಹಲಿ: ಸುಳ್ಳು ಸುದ್ದಿಗಳನ್ನುಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್ ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುರುವಾರ ನಿರ್ಬಂಧಿಸಿದೆ.
ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಚಾನೆಲ್ಗಳು ನಕಲಿ ಸುದ್ದಿ ಆರ್ಥಿಕತೆಯ ಭಾಗವಾಗಿವೆ.
ಸಂವಾದ್ ಟಿವಿ, ನೇಷನ್ ಟಿವಿ, ಸರೋಕರ್ ಭಾರತ್, ನೇಷನ್ 24, ಸ್ವರ್ಣಿಮ್ ಭಾರತ್ ಮತ್ತು ಸಂವಾದ್ ಸಮಾಚಾರ್ನ ಯೂಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸಲಾಗಿದೆ.
ಸಂಘಟಿತ ತಪ್ಪು ಮಾಹಿತಿ ಜಾಲದ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಆರು ಯೂಟ್ಯೂಬ್ ಚಾನೆಲ್ಗಳು ಸುಮಾರು 20 ಲಕ್ಷ ಚಂದಾದಾರರನ್ನು ಹೊಂದಿದ್ದವು. ಅವರ ವೀಡಿಯೊಗಳನ್ನು 51 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.