ಸೆಪ್ಟೆಂಬರ್‌ ನಲ್ಲೇ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದ ಹೊಸ ತಳಿ ಬಿಎಫ್‌ 7.!; ಮತ್ತಷ್ಟು ಹೆಚ್ಚಿದ ಆತಂಕ

ಸೆಪ್ಟೆಂಬರ್‌ ನಲ್ಲೇ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದ ಹೊಸ ತಳಿ ಬಿಎಫ್‌ 7.!; ಮತ್ತಷ್ಟು ಹೆಚ್ಚಿದ ಆತಂಕ

ಬೆಂಗಳೂರು: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ರೂಪಾಂತರಿ ಬಿಎಫ್.‌ 7 ಬೆಂಗಳೂರಿಗೂ ಬರುವ ಸಾಧ್ಯತೆ ಇದೆ.

ಈಗಾಗಲೇ ಮತ್ತೆ ಕೊರೊನಾ ಅಲೆ ಶುರುವಾಗಿದೆ

ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿದ್ದಾರೆ.ಒಮಿಕ್ರಾನ್‌ ಬಿಎಫ್‌ 7ರೂಪಾಂತರಿ ತಳಿ ಬೆಂಗಳೂರಿಗೆ ಜುಲೈ ಕಾಲಿಟ್ಟಿದೆ ಎಂಬ ಮಾತು ಕೇಳಿ ಬಂದಿತ್ತು. ಕಳೆದ ಸೆಪ್ಟಂಬರ್‌ ನಲ್ಲಿಯೇ ಬೆಂಗಳೂರಿನಲ್ಲಿ ಪ್ರತಿನಿತ್ಯ 200 ರಿಂದ 300 ಸೋಂಕಿತರು ಪತ್ತೆಯಾಗುತ್ತಿದ್ದರು ಎಂದು ಬಿಬಿಎಂಪಿ ಆಯಕ್ತರು ಬಿಎಫ್‌ 7 ಪತ್ತೆ ಬಗ್ಗೆ ಮಾಹಿತಿ ನೀಡಿದ್ದರು.

ಶೇ. 20 ರಷ್ಟು ಅಂದರೆ ಮೂರು ಜನರ ಗಂಟಲು ದ್ರವವನ್ನು ಜಿನೋಮಿಕ್‌ ಸಿಕ್ವೆನ್ಸಿಂಗ್‌ ಗೆ ಕಳುಹಿಸಲಾಗಿತ್ತು. ಅದರಲ್ಲಿ 2 ಜನರಿಗೆ ಬಿಎಫ್‌ 7 ದೃಢಪಟ್ಟಿತ್ತು. ಆದರೆ ಸೋಂಕಿತರು ಆರೋಗ್ಯವಾಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ವ್ಯಾಕ್ಸಿನೇಷನ್‌ ಪ್ರಭಾವದಿಂದ ಬಿಎಫ್‌ ೭ ನಿಂದ ಹಾನಿಯಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.