ಕರ್ತವ್ಯ ನಿರತ ಕಂದಾಯ ಇಲಾಖೆ ನೌಕರನ ಮೇಲೆ ಹಲ್ಲೆ: ವಕೀಲನ ವಿರುದ್ಧ ದೂರು ದಾಖಲು

ಬೆಂಗಳೂರು: ಕರ್ತವ್ಯ ನಿರತ ಕಂದಾಯ ಇಲಾಖೆ ನೌಕರರ ಮೇಲೆ ವಕೀಲರೊಬ್ಬರು ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ.ಕೃಷ್ಣಮೂರ್ತಿ ಹಲ್ಲೆಗೊಳಗಾದವರು.
ಈ ಸಂಬಂಧ ಕೃಷ್ಣಮೂರ್ತಿ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜತೆಗೆ ಘಟನೆಯ ಸಂಬಂಧ ಕಂದಾಯ ಇಲಾಖೆಯ ನೌಕರರ ಸಂಘ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.