ಬ್ಯಾಂಕ್‍ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಹೊಸ ಯೋಜನೆ : ನಿರ್ಮಲಾ ಸೀತಾರಾಮನ್

ಬ್ಯಾಂಕ್‍ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಹೊಸ ಯೋಜನೆ : ನಿರ್ಮಲಾ ಸೀತಾರಾಮನ್

ನವದೆಹಲಿ -  ಬ್ಯಾಂಕ್‍ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಎ-ಐಸಿಸಿಐ ಲೀಡ್ಸ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ಕೆವೈಸಿಗೆ ಸಂಬಂದಿಸಿದಂತೆ ಸರ್ಕಾರದಿಂದ ಮತ್ತೊಂದು ಯೋಜನೆ ರೂಪಿಸಲಾಗುತ್ತಿದ್ದು ಇದರಿಂದ ಬ್ಯಾಂಕ್ ಗ್ರಾಹಕರು ಮತ್ತು ಹಣಕಾಸು ಸಂಸ್ಥೆಗಳ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ವಿವಿಧ ಹಣಕಾಸು ಸಂಸ್ಥೆಗಳ ನಡುವಿನ ವಹಿವಾಟುಗಳನ್ನು ಸುಲಭಗೊಳ್ಳಲಿದೆ ಎಂದರು. ಏಕರೂಪದ ಕೆವೈಸಿ ಯೋಜನೆಯನ್ನು ಜಾರಿಗೆ ನಿರ್ಧರಿಸಿದ್ದು, ಇದರಿಂದ ಒಮ್ಮೆ ಕೆವೈಸಿ ಸಲ್ಲಿಸಿದ ನಂತರ, ಅದನ್ನು ಹಲವು ಬಾರಿ ಬಳಸಬಹುದುೀ ಯೋಜನೆ ಹೊಸ ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.