ಮೃತದೇಹ ತೆಗೆಯಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ಶಾಕ್
ನದಿಯೊಂದರಲ್ಲಿ ಆರಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮೃತಪಟ್ಟ ದೇಹವೆಂದು ಭಾವಿಸಿದ ರಕ್ಷಣಾ ಸಿಬ್ಬಂದಿ ಆತನನ್ನು ಮೇಲೆತ್ತಲು ಧಾವಿಸಿದ್ದಾರೆ.
ಒಕ್ಲಾಹಾಮಾದ ತಲ್ಸಾದಲ್ಲಿ ಜರುಗಿದ ಈ ಘಟನೆಯಲ್ಲಿ, ನೀರಿನ ಮೇಲೆ ತೇಲುತ್ತಿದ್ದ ವ್ಯಕ್ತಿಯತ್ತ ಧಾವಿಸಲು ಸೇಫ್ಟಿ ದೋಣಿಯೊಂದನ್ನು ತೆಗೆದುಕೊಂಡು ಹೋದ ತುರ್ತು ಸೇವಾ ಸಿಬ್ಬಂದಿಗೆ, ಬೇಸಿಗೆ ಬೇಗೆ ತೀರಿಸಿಕೊಳ್ಳಲು ಆತ ಆರಾಮಾಗಿ ಹಾಗೆ ನಿದ್ರಿಸುತ್ತಿದ್ದ ಎಂದು ಅರಿವಿಗೆ ಬಂದಿದೆ.
ಸಿಬ್ಬಂದಿಯ ಪೈಕಿ ಒಬ್ಬರು ಆತನ ಪಲ್ಸ್ ಪರೀಕ್ಷಿಸಿ ನೋಡಿದಾಗ ಆತ ಧುತ್ತನೇ ಎದ್ದಿದ್ದಾರೆ. ಈ ವಿನೋದಮಯ ವಿಡಿಯೋವನ್ನು ತಲ್ಸಾ ಅಗ್ನಿಶಾಮಕ ಇಲಾಖೆ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದೆ.