ಅಂಬೇಡ್ಕರ್ ಇದ್ದಿದ್ದರೆ ಬಿಜೆಪಿ ಅವರನ್ನೂ ಪಾಕ್ ಪರ ಎಂದು ಅಪಪ್ರಚಾರ ಮಾಡುತ್ತಿದ್ದರು: ಮೊಹಬೂಬಾ ಮುಫ್ತಿ

ಅಂಬೇಡ್ಕರ್ ಇದ್ದಿದ್ದರೆ ಬಿಜೆಪಿ ಅವರನ್ನೂ ಪಾಕ್ ಪರ ಎಂದು ಅಪಪ್ರಚಾರ ಮಾಡುತ್ತಿದ್ದರು: ಮೊಹಬೂಬಾ ಮುಫ್ತಿ

ಶ್ರೀನಗರ: ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಇದ್ದಿದ್ದರೆ ಅವರನ್ನೂ ಬಿಜೆಪಿ ಪಾಕ್ ಪರ ಎಂದು ಅಪಪ್ರಚಾರ ಮಾಡುತ್ತಿತ್ತು ಎಂದು ಪಿಡಿಪಿ ಮುಖ್ಯಸ್ಥೆ ಮೊಹಬೂಬಾ ಮುಫ್ತಿ ಆರೋಪಿಸಿದ್ದಾರೆ.

ಸಂವಿಧಾನದ 370ನೇ ವಿಧಿ ಮೂಲಕ ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಲಾಗಿತ್ತು. ಆದರೆ ಈ ವಿಶೇಷ ಅಧಿಕಾರವನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನಾಶಗೊಳಿಸಿದೆ. ಅಲ್ಲದೆ ಅಂಬೇಡ್ಕರ್ ಈಗ ಜೀವಂತವಾಗಿಲ್ಲ, ಇದ್ದಿದ್ದರೆ ಅವರನ್ನು ಪಾಕಿಸ್ತಾನ ಎಂದು ಬಿಜೆಪಿಗರು ದೂಷಿಸುತ್ತಿದ್ದರು ಎಂದು ಮುಫ್ತಿ ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿರುವ ಬಗ್ಗೆ ಮರುಚಿಂತನೆ ನಡೆಸಬಹುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದು ಇದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

2019ರಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.